ಪಾಟ್ನಾ: ದೇಶಾದ್ಯಂತ ಕರೋನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಬಿಹಾರದಲ್ಲಿಯೂ ಹೊಸ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಸರ್ಕಾರವು ಅನ್‌ಲಾಕ್ -5 ರ ಅಡಿಯಲ್ಲಿ ಶಾಲೆಗಳನ್ನು ತೆರೆಯಲು ಆದೇಶಿಸಿದೆ. ಬಿಹಾರದಲ್ಲಿ 9 ರಿಂದ 10ನೇ ತರಗತಿವರೆಗಿನ ಆಗಸ್ಟ್ 7 ರಿಂದಲೂ ಮತ್ತು 1 ರಿಂದ 8 ತರಗತಿವರೆಗೆ ಆಗಸ್ಟ್ 16 ರಿಂದ ಶಾಲೆಗಳು ಆರಂಭಿಸುವಂತೆ ಬಿಹಾರ ಸರ್ಕಾರ ಆದೇಶಿಸಿದೆ.  


COMMERCIAL BREAK
SCROLL TO CONTINUE READING

ಹೊಸ ಮಾರ್ಗಸೂಚಿ ಬಿಡುಗಡೆ:
ಈ ಕುರಿತಂತೆ ಬುಧವಾರ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕರೋನಾವೈರಸ್ (Coronavirus) ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಆಗಸ್ಟ್ 7 ರಿಂದ ಆಗಸ್ಟ್ 25 ರವರೆಗೆ ವಾರದ ಮುಚ್ಚುವಿಕೆ ನಿರ್ಬಂಧದೊಂದಿಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇದಲ್ಲದೆ 9 ರಿಂದ 10 ನೇ ತರಗತಿಗಳು ಆಗಸ್ಟ್ 7 ರಿಂದ ಮತ್ತು 1 ರಿಂದ 8 ನೇ ತರಗತಿಗಳು ಆಗಸ್ಟ್ 16 ರಿಂದ ಶಾಲೆಗಳು  ಆರಂಭವಾಗಲಿದೆ (Schools Reopen) ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- e-RUPI Digital Payment: ಡಿಜಿಟಲ್ ಪಾವತಿ ಉತ್ತೇಜಿಸುವ E-RUPIಯ 10 ಪ್ರಯೋಜನ ತಿಳಿಯಿರಿ


ಇದಲ್ಲದೆ ತರಬೇತಿ ಸಂಸ್ಥೆಗಳು ಶೇಕಡಾ 50 ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ (ಒಂದು ದಿನ ಹೊರತುಪಡಿಸಿ). ಸಾರ್ವಜನಿಕ ಸಾರಿಗೆ ವಾಹನಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಓಡಿಸಲು ಅನುಮತಿಸಲಾಗುವುದು. ಚಿತ್ರಮಂದಿರಗಳು ಮತ್ತು ಶಾಪಿಂಗ್ ಮಾಲ್‌ಗಳು (Shopping Malls) ಸಹ ನಿರ್ಬಂಧಗಳೊಂದಿಗೆ ತೆರೆಯಲ್ಪಡುತ್ತವೆ ಎಂದೂ ಕೂಡ ಸಿಎಂ ಟ್ವಿಟರ್ ಹ್ಯಾಂಡಲ್‌ನಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ- Ayodhya Ram Mandir : ಡಿಸೆಂಬರ್ 2023ರಿಂದ ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರಿಗೆ ಶ್ರೀರಾಮ ದರ್ಶನ


ಆದಾಗ್ಯೂ, ಕೋವಿಡ್‌ಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಶಾಲೆಗಳಲ್ಲಿ ಕೋವಿಡ್ ಸ್ನೇಹಿ ವರ್ತನೆಯ ಬಗ್ಗೆ ಮಕ್ಕಳಿಗೆ ತಿಳಿಸಲಾಗುವುದು ಎಂದವರು ತಿಳಿಸಿದ್ದಾರೆ. 


ನಗರ ಪ್ರವಾಸ:
ಬುಧವಾರ ಪಾಟ್ನಾ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕರೋನಾ ಪ್ರೋಟೋಕಾಲ್ ಅನುಸರಣೆಯ ಬಗ್ಗೆ ಅವಲೋಕಿಸಿದರು. ನಗರ ಪ್ರವಾಸದ ಸಮಯದಲ್ಲಿ, ಜನರು ಸಾಮಾಜಿಕ ಅಂತರದ ನಿಯಮ ಮತ್ತು ಮಾಸ್ಕ್ ಧರಿಸುವ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಅವರು ಪರಿಶೀಲಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ