Class 10th, 12th Exam 2022: 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಈ ಕೆಲಸ ಮಾಡದಿದ್ದರೆ ಇಂದೇ ಮುಗಿಸಿಕೊಳ್ಳಿ, ತಪ್ಪಿದರೆ ಪರೀಕ್ಷೆ ಬರೆಯುವುದು ಸಾಧ್ಯವಿಲ್ಲ
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ವಿಧಿಸಿದ ನಂತರ, ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಿರುವುದು ಸಾಮಾನ್ಯ ವಿಚಾರ.
ನವದೆಹಲಿ : ಸೆಂಟ್ರಲ್ ಕೌನ್ಸಿಲ್ ಆಫ್ ಸೆಕೆಂಡರಿ ಎಜುಕೇಶನ್ ಅಂದರೆ CBSE ಟರ್ಮ್ 1 ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಇದರೊಂದಿಗೆ ಮಂಡಳಿಯು 10 ಮತ್ತು 12 ನೇ ಪರೀಕ್ಷೆಗೆ (Class 10th, 12th Exam 2022) ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಲವೊಂದು ರಿಯಾಯಿತಿಯನ್ನು ಕೂಡಾ ಘೋಷಿಸಿದೆ. ಶಾಲೆಯಿಂದ ಅರ್ಜಿ ಸಲ್ಲಿಸಲು ಹಸಿರು ನಿಶಾನೆ ತೋರಿಸಿದೆ. ಬೇರೆ ನಗರದಿಂದ ಪರೀಕ್ಷೆ ತೆಗೆದುಕೊಳ್ಳುವ ಸೌಲಭ್ಯವನ್ನು ಕೂಡಾ ಒದಗಿಸಿದೆ. ಆದರೆ ಪರೀಕ್ಷೆಗಳನ್ನು (CBSE Exam 2022) ಮಾತ್ರ ಆಫ್‌ಲೈನ್ ಮೋಡ್‌ನಲ್ಲಿಯೇ ನಡೆಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರಯೋಜನ :
ಕರೋನಾ (Coronavirus) ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ (Lock down) ವಿಧಿಸಿದ ನಂತರ, ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಿರುವುದು ಸಾಮಾನ್ಯ ವಿಚಾರ. ಮಂಡಳಿಯ ಈ ನಿರ್ಧಾರದಿಂದ ಅಂಥಹ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡುವುದು ಸುಲಭವಾಗಲಿದೆ.
ಇದನ್ನೂ ಓದಿ : Aadhaar Update: ಆಫ್‌ಲೈನ್‌ನಲ್ಲಿಯೂ ಮಾಡಬಹುದು ಆಧಾರ್ ವೆರಿಫಿಕೆಶನ್, ಈ ಕೆಲಸ ಮಾಡಿದರೆ ಸಾಕು
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ :
10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು (Exan center) ಬದಲಾಯಿಸಲು ಇಂದೇ ಕೊನೆಯ ಅವಕಾಶವಾಗಿರಲಿದೆ. ನವೆಂಬರ್ 10 ರ ಮಧ್ಯರಾತ್ರಿಯವರೆಗೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಲು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ವಿನಂತಿಸಬಹುದು. ಶಾಲೆಗಳು ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ನವೆಂಬರ್ 12 ರ ಮಧ್ಯರಾತ್ರಿಯೊಳಗೆ ಮಂಡಳಿಯ ವೆಬ್‌ಸೈಟ್‌ನಲ್ಲಿ (CBSE Website) ಅಪ್‌ಲೋಡ್ ಮಾಡುತ್ತವೆ.
ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ಹೇಗೆ ಬದಲಾಯಿಸಬಹುದು :
ಪರೀಕ್ಷಾ ಕೇಂದ್ರವನ್ನು ಬದಲಾಯಿಸಲು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ. ನಂತರ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಮಂಡಳಿಯು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : Vodafone-Idea: Vi ಯ ಅಗ್ಗದ ಯೋಜನೆ, ಉಚಿತ ಕರೆ ಮತ್ತು ಇಂಟರ್ನೆಟ್‌ನೊಂದಿಗೆ ಸಿಗಲಿದೆ ಹಲವು ಪ್ರಯೋಜನ
CBSE ಸ್ವರೂಪದಲ್ಲಿ ಬದಲಾವಣೆಗಳು :
ಈ ಬಾರಿ CBSE ಪರೀಕ್ಷೆಗಳು 2 ಬಾರಿ ನಡೆಯಲಿವೆ. ಈ ಪರೀಕ್ಷೆಗಳ ಮೊದಲ ಅವಧಿಯು ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆಯಲಿದ್ದು, ಎರಡನೇ ಅವಧಿಯು ಮಾರ್ಚ್-ಏಪ್ರಿಲ್ 2022 ರಲ್ಲಿ ನಡೆಯಲಿದೆ. ಎರಡೂ ಅವಧಿಯ ಪರೀಕ್ಷೆಗಳಲ್ಲಿ, 50-50% ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡೂ ಪರೀಕ್ಷೆಗಳ ಅಂಕಗಳನ್ನು ಒಟ್ಟುಗೂಡಿಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.