`ಜೈ ಶ್ರೀ ರಾಮ್` ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ
`ಜೈ ಶ್ರೀರಾಮ್` ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ಧರ್ಮಗುರುವೋಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ನಡೆದಿದೆ.
ಬಾಗಪತ್: 'ಜೈ ಶ್ರೀರಾಮ್' ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ಧರ್ಮಗುರುವೋಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ನಡೆದಿದೆ.
ಮುಝಫ್ಫರ್ ನಗರ ನಿವಾಸಿಯಾದ ಇಮಾಮ್ ಇಮ್ಲಾಕ್-ಉರ್-ರೆಹಮಾನ್ ಅವರು ಶನಿವಾರ ತಮ್ಮ ಬೈಕ್ ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸುಮಾರು 12 ಯುವಕರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ ಅವರ ಗಡ್ಡವನ್ನೂ ಎಳೆದಾಡಿದ್ದಾರೆ. "'ಜೈ ಶ್ರೀರಾಮ್' ಘೋಷಣೆ ಕೂಗುವಂತೆಯೂ ತನ್ನನ್ನು ಬಲವಂತ ಮಾಡಿದರು. ಬಳಿಕ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನಾನು ಜೋರಾಗಿ ಕೂಗಿಕೊಂಡಾಗ ನನ್ನ ಗ್ರಾಮದ ಇಬ್ಬರು ವ್ಯಕ್ತಿಗಳು ಬಂದು ನನ್ನನ್ನು ರಕ್ಷಿಸಿದರು" ಅವರುಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಾಗಪತ್ ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ, ಮೇಲ್ನೋಟಕ್ಕೆ ಇದೊಂದು ದೈಹಿಕ ಹಲ್ಲೆ ಪ್ರಕರಣದಂತೆ ಕಂಡುಬಂದರೂ ಇಮಾಮ್ ದೂರಿನ ಮೇರೆಗೆ 12 ಯುವಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಆಧಾರದಲ್ಲಿ ಅವರ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಿದ್ದಾರೆ.