Himachala Pradesh Cloudburst: ಹಿಮಾಚಲ ಪ್ರದೇಶದ ಶ್ರೀಖಂಡ್ ಬಳಿ ಬುಧವಾರ (ಆಗಸ್ಟ್ 07)  ರಾತ್ರಿ ಸಮೇಜ್ ಮತ್ತು ಬಾಗಿ ಸೇತುವೆಗಳ ಬಳಿ ಮೇಘಸ್ಫೋಟ (Cloudburst In Himachal Pradesh Samej) ಸಂಭವಿಸಿದ್ದು ಈ ದುರಂತ ಘಟನೆಯಲ್ಲಿ ಸುಮಾರು 45 ಜನರು ಕೊಚ್ಚಿ ಹೋಗಿದ್ದಾರೆ. 


COMMERCIAL BREAK
SCROLL TO CONTINUE READING

ಮೇಘಸ್ಫೋಟ (Cloudburst) ಸಂಭವಿಸಿದ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡದಿಂದ (NDRF Team) ರಕ್ಷಣಾ ಕಾರ್ಯ ಮುಂದುವರೆದಿದ್ದು ಇದುವರೆಗೂ 13 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ವರದಿಯಾಗಿದೆ. 


ರಕ್ಷಣಾ ಕಾರ್ಯಾಚರಣೆಯಲ್ಲಿ (Rescue Operation) ಯಾವುದೇ ವಿಳಂಬವಾಗದಂತೆ ತಡೆಯಲು ಈ ವರ್ಷ ಹಿಮಾಚಲ ಪ್ರದೇಶಕ್ಕೆ ಸುಸಜ್ಜಿತ ಎನ್‌ಡಿ‌ಆರ್‌ಎಫ್ ತಂಡವನ್ನು ಸಿದ್ದಪರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ನೇ ಬೆಟಾಲಿಯನ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ- ಆಗಸ್ಟ್ 8 ರವರೆಗೆ ಸಿರ್ಸಾದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಹರಿಯಾಣ ಸರ್ಕಾರ 


ಹಿಮಾಚಲ ಪ್ರದೇಶದಲ್ಲಿ (Himachal Pradesh) ಸಂಭವಿಸಿರುವ ಮೇಘಸ್ಫೋಟಕ್ಕೆ ಸಂಬಂಧಿಸಿದಂತೆ, ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಲ್ಜಿಂದರ್ ಸಿಂಗ್, "ಸಮೇಜ್ ಮೇಘಸ್ಫೋಟವು ದೊಡ್ಡ ದುರಂತವಾಗಿದೆ. ಈ ವರ್ಷ, ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಎನ್‌ಡಿಆರ್‌ಎಫ್ ತಂಡಗಳನ್ನು ಹಿಮಾಚಲ ಪ್ರದೇಶದ ದೂರದ ಸ್ಥಳಗಳಿಗೆ ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. 


ಇದೇ ವೇಳೆ, ದುರಂತ ಸ್ಥಳದಲ್ಲಿ ಗುರುವಾರ ಮುಂಜಾನೆವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೊದಲಿಗೆ ನಾಲ್ಕು ಶವಗಳನ್ನು ಹೊರತೆಗೆಯಲಾಗಿತ್ತು. ಇನ್ನೂ ಹತ್ತು ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 9 ಮೃತದೇಹಗಳು ಪತ್ತೆಯಾಗಿವೆ. ಆದಾಗ್ಯೂ, ಇನ್ನೋರ್ವ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ- ಸೆಪ್ಟೆಂಬರ್ 3 ರಂದು ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ


ರಾಜ್ಯಾದ್ಯಂತ ರೆಡ್ ಅಲರ್ಟ್: 
ಗಮನಾರ್ಹವಾಗಿ, ಮೇಘಸ್ಫೋಟ ಸಂಭವಿಸುವ ಮೊದಲು ಆಗಸ್ಟ್ 07ರಂದು ಮಳೆ ಮುನ್ಸೂಚನೆ ನೀಡಿದ್ದ ಭಾರತೀಯ ಹವಾಮಾನ ಇಲಾಖೆ, ಮಂಡಿ ಜಿಲ್ಲೆಯ ಜೋಗಿಂದರ್ ನಗರದಲ್ಲಿ 24 ಗಂಟೆಗಳಲ್ಲಿ ಗರಿಷ್ಠ 110 ಮಿಮೀ ಮಳೆಯಾಗಿದೆ. ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಂಭವವಿದೆ ಎಂದು ಭವಿಷ್ಯ ನುಡಿದಿತ್ತು. ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೂಡ ಘೋಷಿಸಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.