Cloudburst In Solan : ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಮೇಘಸ್ಫೋಟ ಉಂಟಾಗಿದೆ. ಮೇಘಸ್ಫೋಟದ ಕಾರಣದಿಂದಾಗಿ 7 ಮಂದಿ ಸಾವನ್ನಪ್ಪಿದ್ದು, 3 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗುತ್ತಿದ್ದು, ಇಡೀ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಜನರಲ್ಲಿ ಭಯ ಆವರಿಸಿದೆ. 


COMMERCIAL BREAK
SCROLL TO CONTINUE READING

ಅಪಘಾತದ ಕುರಿತು ಸಿಎಂ ಸುಖು ಟ್ವೀಟ್ :
ಈ ಘಟನೆಯ ಕುರಿತು ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಟ್ವೀಟ್ ಮಾಡಿ, ಸೋಲನ್ ಜಿಲ್ಲೆಯ ಧವಾಲಾ ಉಪ ತಹಸಿಲ್‌ನ ಜಾಡೋನ್ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದ ದುರಂತದಲ್ಲಿ 7  ಮಂದಿ ಮೃತಪಟ್ಟಿರುವುದು ನೋವಾಗಿದೆ ಎಂದು ಹೇಳಿದ್ದಾರೆ.  ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 


ಇದನ್ನೂ ಓದಿ : Rain Alert: ಈ ಭಾಗಗಳಲ್ಲಿ ಮುಂದಿನ 24 ಗಂಟೆಯಲ್ಲಿ ಸಿಡಿಲು ಸಹಿತ ವರುಣಾರ್ಭಟ: ಬಿರುಗಾಳಿ ಎಚ್ಚರಿಕೆ ನೀಡಿದ IMD


ಮತ್ತೆ ಮತ್ತೆ ಪ್ರಕೃತಿಯ ರುದ್ರ ನರ್ತನ : 
ಹಿಮಾಚಲದಲ್ಲಿ ಪ್ರಕೃತಿಯ ಸತತ ಎರಡನೇ ತಿಂಗಳು ಪ್ರಕೃತಿ ರುದ್ರ ನರ್ತನ ಮುಂದುವರೆಸಿದೆ. ಮಾನ್ಸೂನ್ ಮತ್ತೆ ಆತಂಕ ಸೃಷ್ಟಿಸಿದೆ. ಜುಲೈನಲ್ಲಿ  ಮೋಡ ಸ್ಪೋಟದಿಂದ ವಿನಾಶ ಉಂಟಾಗಿತ್ತು. ಮತ್ತೆ ಆಗಸ್ಟ್‌ನಲ್ಲಿ ಪ್ರಕೃತಿ  ತಾಂಡವವಾಡುತ್ತಿದೆ. 


ಹಿಮಾಚಲದಲ್ಲಿ 452 ರಸ್ತೆಗಳನ್ನು ಮುಚ್ಚಲಾಗಿದೆ : 
ಇಡೀ ಹಿಮಾಚಲ ಪ್ರದೇಶದಲ್ಲಿ 2 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 452 ರಸ್ತೆಗಳನ್ನು ಮುಚ್ಚಲಾಗಿದೆ. ಮಂಡಿ ಜಿಲ್ಲೆಯಲ್ಲಿ ಗರಿಷ್ಠ 233 ರಸ್ತೆಗಳನ್ನು ಮುಚ್ಚಲಾಗಿದ್ದು, ಶಿಮ್ಲಾ ಜಿಲ್ಲೆಯಲ್ಲಿ 60 ರಸ್ತೆಗಳನ್ನು ಮುಚ್ಚಲಾಗಿದೆ. ಈ ರಸ್ತೆಗಳನ್ನು ಮುಚ್ಚಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಪ್ರವಾಹ ಮತ್ತು ಮಳೆಯಿಂದಾಗಿ 1800 ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿದ್ದು, ಹೆಚ್ಚಿನ ಭಾಗದಲ್ಲಿ ವಿದ್ಯುತ್ ಸೇವೆ ಸ್ಥಗಿತಗೊಂಡಿದ್ದು, ಲಕ್ಷಾಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.


ಇದನ್ನೂ ಓದಿ : ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗಡಿ ನಿಯಂತ್ರಣ ರೇಖೆಯಲ್ಲಿ ಹೈಅಲರ್ಟ್


ರಾಜ್ಯದ ಹತ್ತಾರು ಹಳ್ಳಿಗಳು ಮತ್ತು ನಗರಗಳು ಪ್ರವಾಹದಲ್ಲಿ ಮುಳುಗಿವೆ.  ಅನೇಕ ಮನೆಗಳು ಅವಶೇಷಗಳಡಿ ಸೇರಿವೆ. ಇದೇ ವೇಳೆ ಜನರಿಗೆ ಕುಡಿಯುವ ನೀರು ಕೂಡಾ ಸಿಗುತ್ತಿಲ್ಲ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಜೂನ್ 24 ರಿಂದ ಆಗಸ್ಟ್ 12 ರವರೆಗೆ ಹಿಮಾಚಲದಲ್ಲಿ 255 ಮಂದಿ ಸಾವನ್ನಪ್ಪಿದ್ದಾರೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಇದುವರೆಗೆ 935 ಮನೆಗಳು ನಾಶವಾಗಿದ್ದು, 7,758 ಮನೆಗಳಿಗೆ ಹಾನಿಗೊಳಗಾಗಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ