ಚಂಡೀಗಢ : ಪಂಜಾಬ್ ಕಾಂಗ್ರೆಸ್ ನಲ್ಲಿ (Punjab Congress) ಮತ್ತೊಮ್ಮೆ ವಿವಾದ ಬಗೆಹರಿಸುವ ಸೂತ್ರಕ್ಕೆ ಮುದ್ರೆ ಬಿದ್ದಿದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ನಡುವಿನ ವಿವಾದದ ವರದಿಗಳ ನಡುವೆ, ಪಂಜಾಬ್ ಡಿಜಿಪಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಸಿದ್ದು ರಾಜ್ಯಾಧ್ಯಕ್ಷರಾಗಿ ಮತ್ತೆ ಮುಂದುವರಿಯಬೇಕಾದರೆ ಹೊಸ ಎಜಿ (AG) ನೇಮಕ ಮಾಡುವಂತೆ ಹಾಕಿದ್ದ ಷರತ್ತಿಗೂ ಒಪ್ಪಿಗೆ ಸೂಚಿಸಲಾಗಿದೆ. 


COMMERCIAL BREAK
SCROLL TO CONTINUE READING

ಜೊತೆಯಾದ ಸಿದ್ದು- ಚನ್ನಿ :
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸಿಎಂ ಚನ್ನಿ, ಪಂಜಾಬ್ ಡಿಜಿಪಿಯನ್ನು (DGP) ಬದಲಾಯಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಅಡ್ವೊಕೇಟ್ ಜನರಲ್ ಎ.ಪಿ.ಎಸ್. ಡಿಯೋಲ್ ಅವರ ರಾಜೀನಾಮೆಯನ್ನು ಕೂಡಾ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೇ ರಾಜ್ಯದ 36 ಸಾವಿರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಚನ್ನಿ ತಿಳಿಸಿದ್ದಾರೆ. 


ಇದನ್ನೂ ಓದಿ : ಕೇವಲ 1400 ರೂಪಾಯಿಗೆ ವಿಮಾನಯಾನದ ಅವಕಾಶ, ತಕ್ಷಣ ಟಿಕೆಟ್ ಬುಕ್ ಮಾಡಿ..!


 ಈ ಷರತ್ತು ಹಾಕಿದ್ದ ಸಿದ್ದು :
ತಾವು  ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕಾದರೆ, ಹೊಸ ಅಡ್ವೊಕೇಟ್ ಜನರಲ್ (AG) ನೇಮಕ ಮಾಡಬೇಕು ಎಂದು ಸಿದ್ದು ಷರತ್ತು ಹಾಕಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದ ಬಳಿಕ ಸಿದ್ದು ರಾಜೀನಾಮೆ ವಾಪಸ್ ಪಡೆದರೂ, ಕೆಲಸ ಆರಂಭಿಸಿರಲಿಲ್ಲ. ಹೊಸ ಅಡ್ವೊಕೇಟ್ ಜನರಲ್ ನೇಮಕ ಮತ್ತು ಹೊಸ ಡಿಜಿಪಿ ಕುರಿತ ನಿರ್ಧಾರವಾದ ಬಳಿಕ ಕೆಲಸ ಮುಂದುವರಿಸುವುದಾಗಿ ಹೇಳಿದ್ದರು. ಇದಾದ ನಂತರ ಅಡ್ವೊಕೇಟ್ ಜನರಲ್ ಎ.ಪಿ.ಎಸ್. ಡಿಯೋಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಪಂಜಾಬ್ ಸರ್ಕಾರವು 10 ಹೆಸರುಗಳ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿತು.


ಸಚಿವರ ಖಾತೆ ಹಂಚಿಕೆ ಬಳಿಕ ರಾಜೀನಾಮೆ ನೀಡಿದ್ದರು :
ಸತ್ಯದ ಹಾದಿಯಲ್ಲಿ ಸಾಗುವಾಗ ಹುದ್ದೆಗಳು ಮುಖ್ಯವಲ್ಲ’ ​​ಎಂದು ಈ ಹಿಂದೆ ಸಿದ್ದು ಹೇಳಿದ್ದರು. ಜುಲೈ 19 ರಂದು ರಾಜ್ಯ ಮುಖ್ಯಸ್ಥರಾಗಿ ನೇಮಕಗೊಂಡ ಸಿಧು, ಅಮರಿಂದರ್ ಸಿಂಗ್ (Amarinder singh) ನಂತರ ಮುಖ್ಯಮಂತ್ರಿಯಾದ ಚರಂಜಿತ್ ಚನ್ನಿ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಕೆಲವೇ ನಿಮಿಷಗಳಲ್ಲಿ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಬದಲಿಸುವಂತೆ ಹೈಕಮಾಂಡ್ (Congress high Command) ಮೇಲೆ ಸಿದ್ದು ತೀವ್ರ ಒತ್ತಡ ಹೇರಿದ್ದರೂ. ಇದಾದ ನಂತರವೇ ಕಾಂಗ್ರೆಸ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು.


ಇದನ್ನೂ ಓದಿ : ಇನ್ನು ಸಿಗುವುದಿಲ್ಲ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಈ ಸೌಲಭ್ಯ, ತಿಳಿದುಕೊಂಡಿರದಿದ್ದರೆ ನಷ್ಟ ಖಂಡಿತಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.