ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 2014 ರಲ್ಲಿ ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಲು ವಿಫಲರಾಗಿದ್ದಾರೆ ಎಂಬ ಆರೋಪದಡಿ ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.


COMMERCIAL BREAK
SCROLL TO CONTINUE READING

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಫಡ್ನವಿಸ್ ವಿರುದ್ಧದ ದೂರನ್ನು ಪುನರುಜ್ಜೀವನಗೊಳಿಸಿ, ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆ ನಡೆಸಲಿದೆ ಎಂದು ಹೇಳಿದರು.ಈ ತೀರ್ಪು ಅಕ್ಟೋಬರ್ 21 ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.


ಫಡ್ನವಿಸ್ ಅವರಿಗೆ ಈ ಪ್ರಕರಣದ ವಿಚಾರವಾಗಿ ಅರಿವಿತ್ತು, ಆದರೆ ಅವರ ಅಫಿಡವಿಟ್ನಲ್ಲಿ ಪ್ರಕರಣಗಳನ್ನು ಉಲ್ಲೇಖಿಸಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಚುನಾವಣಾ ಅಫಿಡವಿಟ್ನಲ್ಲಿ ಮಾಹಿತಿಯನ್ನು ಮರೆಮಾಚಿದ್ದಕ್ಕೆ ಅಥವಾ ಸುಳ್ಳು ಮಾಹಿತಿ ನೀಡುವ ವಿಚಾರವಾಗಿ ಆರು ತಿಂಗಳ ಜೈಲು ಅಥವಾ ದಂಡ ಎರಡನ್ನು ವಿಧಿಸಲಾಗುತ್ತದೆ. 1996 ಮತ್ತು 1998 ರಲ್ಲಿ ಫಡ್ನವಿಸ್ ವಿರುದ್ಧ ಮೋಸ ಮತ್ತು ಖೋಟಾ ಆರೋಪದ ಎರಡು ಪ್ರಕರಣಗಳನ್ನು ದಾಖಲಿಸಲಾಯಿತು, ಆದರೆ ಆದರೆ ಜಾರ್ಜ್ ಶೀಟ್ ಹಾಕಿಲ್ಲ ಎನ್ನಲಾಗಿದೆ.


ಫಡ್ನವೀಸ್ ಅವರಿಗೆ ನೀಡಿದ ಕ್ಲೀನ್ ಚಿಟ್ ನ್ನು ಪ್ರಶ್ನಿಸುವ ಅರ್ಜಿಯಲ್ಲಿ ಅಭ್ಯರ್ಥಿಯು ಆರೋಪಗಳನ್ನು ಮತ್ತು ವಿಚಾರಣಾ ನ್ಯಾಯಾಲಯವು ಗಮನ ಸೆಳೆದ ಎಲ್ಲಾ ಪ್ರಕರಣಗಳ ವಿವರಗಳನ್ನು ಬಹಿರಂಗಪಡಿಸಲು ಕಾನೂನುಬದ್ಧವಾಗಿ ಅಗತ್ಯವಿದೆ ಎಂದು ಅರ್ಜಿದಾರರು ವಾದಿಸಿದರು.