ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕವನ್ನು ಬೆಂಬಲಿಸಿ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರ್ನಾಟಕಕ್ಕೇ ಅಧಿಕೃತವಾಗಿ ಎರಡನೇ ರಾಜಧಾನಿ ಘೋಷಣೆಗೆ ಸಿದ್ದತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ " ನಾನು 12 ವರ್ಷಗಳ ಹಿಂದೆಯೇ ಈ ಸಲಹೆಯನ್ನು ನೀಡಿದ್ದೆ, ಆದರೆ ನಂತರ ಬಂದಂತಹ ಸರ್ಕಾರಗಳು ಇದನ್ನು ಗಂಭೀರವಾಗಿ  ಪರಿಗಣಿಸಿರಲಿಲ್ಲ.ಆದ್ದರಿಂದ ನಾವು ಸುವರ್ಣ ಸೌಧವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡೆವು. ಇದರ ಫಲವಾಗಿ ಅಲ್ಲಿ ಈಗ ವಿಧಾನಸೌಧ ಕಲಾಪಗಳು ನಡೆಯುತ್ತಿವೆ.ಈಗ ಬಿಜೆಪಿ ಕೇವಲ ಇದನ್ನು ಈಗ ಸಮಸ್ಯೆಯನ್ನಾಗಿ ಮಾಡುತ್ತಿದೆ.ಇನ್ನು 15-20 ದಿನಗಳಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳುವೆ. ಮಂಗಳೂರನ್ನು ಆರ್ಥಿಕ  ರಾಜಧಾನಿಯನ್ನಾಗಿ ಮಾಡುವುದನ್ನು ಕೂಡ ಯೋಚಿಸುತ್ತಿರುವೆ" ಎಂದು ತಿಳಿಸಿದರು.


ಈಗಾಗಲೇ ಬೆಳಗಾವಿಯಲ್ಲಿ ವಿಧಾನಸೌಧದ ಮಾದರಿಯಲ್ಲಿಯೇ ಸೌವರ್ಣ ಸೌಧವಿದ್ದು ಇದನ್ನು ಪ್ರಮುಖವಾಗಿ ಮಹಾರಾಷ್ಟ್ರ ಆಗಿಂದಾಗೆ ಗಡಿ ವಿಚಾರವಾಗಿ ತೆಗೆಯುತ್ತಿದ್ದ ಖ್ಯಾತೆಯ ಕಾರಣದಿಂದಾಗಿ ಅಲ್ಲಿ ಸೌವರ್ಣ ಸೌಧವನ್ನು ನಿರ್ಮಿಸಲಾಗಿತ್ತು.


ಈಗ ಉತ್ತರ ಕರ್ನಾಟಕವನ್ನು ಅಭಿವೃದ್ದಿ ವಿಚಾರವಾಗಿ ಕಡೆಗಣಿಸಿರುವ ಹಿನ್ನಲೆಯಲ್ಲಿ ಈ ಭಾಗದ ಜನರು ಈಗ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಕುಮಾರಸ್ವಾಮಿ ಅಧಿಕೃತವಾಗಿ ಎರಡನೇ ರಾಜಧಾನಿಯನ್ನು ಮಾಡುವ ಸಿದ್ದತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಹಲವು ಸರ್ಕಾರಿ ಕಚೇರಿಗಳನ್ನು ಎರಡನೇ ರಾಜಧಾನಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.