ನವದೆಹಲಿ: ನೈಸರ್ಗಿಕ ಅನಿಲದ ಬೆಲೆ ಕಡಿಮೆಯಾದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ-ಪಿಎನ್‌ಜಿ ದರದಲ್ಲಿ ಶೇ. 7ರಷ್ಟು ಇಳಿಕೆ ಕಂಡು ಬಂದಿದೆ. ದೆಹಲಿಯ ಪಕ್ಕದಲ್ಲಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ ಕೆ.ಜಿ. ಒಂದಕ್ಕೆ 3.60 ರೂ. ಕಡಿತಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ(CNG)ಯ ಬೆಲೆಯನ್ನು 3.20 ರೂ.ಗೆ ಇಳಿಸಲಾಗಿದೆ ಎಂದು ಚಿಲ್ಲರೆ ವ್ಯಾಪಾರಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ತಿಳಿಸಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿ ಸಿಎನ್‌ಜಿಯ ಬೆಲೆ ಪ್ರತಿ ಕೆ.ಜಿ.ಗೆ 47.75 ರೂ. ತಲುಪಿದೆ. 


ನೈಸರ್ಗಿಕ ಅನಿಲ ಬೆಲೆಗಳಲ್ಲಿ 26% ಕುಸಿತ: CNG-PNG ದರ ಇಳಿಕೆ ಸಾಧ್ಯತೆ


ದೆಹಲಿಯಲ್ಲಿ ದೇಶೀಯ ಪೈಪ್ ಗ್ಯಾಸ್ (PNG) ಬೆಲೆ ಘನ ಮೀಟರ್‌ಗೆ 1.55 ರೂ. ಕಡಿಮೆಯಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಪ್ರಕಟಿಸಿದೆ. ಅಂತೆಯೇ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ ಪೈಪ್ ಮೂಲಕ ಸರಬರಾಜು ಮಾಡಲಾಗುವ ಅಡುಗೆ ಅನಿಲದ ವೆಚ್ಚವನ್ನು ಘನ ಮೀಟರ್‌ಗೆ 1.65 ರೂ. ಕಡಿಮೆ ಮಾಡಲಾಗಿದೆ ಎಂದು ಅದು ಹೇಳಿದೆ.


ಕಳೆದ ಆರು ತಿಂಗಳಿನಲ್ಲಿ ಸಿಎನ್‌ಜಿಯ ಬೆಲೆಯಲ್ಲಿ ಎರಡನೇ ಬಾರಿಗೆ ಇಳಿಕೆ ಕಂಡುಬಂದಿದೆ. ಇದಕ್ಕೂ ಮೊದಲು 2019ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಸಿಎನ್‌ಜಿಯ ಬೆಲೆಯನ್ನು 1.90 ರೂ. ಇಳಿಕೆ ಮಾಡಲಾಗಿತ್ತು. ಇದೇ ವೇಳೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ ಇದರ ಬೆಲೆ 2.15 ರೂ. ಇಳಿಮುಖವಾಗಿತ್ತು.


ಇದಲ್ಲದೆ ಅಕ್ಟೋಬರ್ 2019ರಲ್ಲಿ ಎನ್‌ಜಿಯ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಈ ದರವನ್ನು  ದೆಹಲಿಯಲ್ಲಿ ಘನ ಮೀಟರ್‌ಗೆ 90 ಪೈಸೆ ಮತ್ತು ಉತ್ತರ ಪ್ರದೇಶದ ಪಕ್ಕದ ನಗರಗಳಲ್ಲಿ ಘನ ಮೀಟರ್‌ಗೆ 40 ಪೈಸೆ ಕಡಿತಗೊಳಿಸಲಾಗಿದೆ.