ನವದೆಹಲಿ: ಭಾರತದಲ್ಲಿ, ಕೊರೊನಾ ವೈರಸ್ ಪ್ರಕರಣಗಳಲ್ಲಿ ನಿರಂತರವಾಗಿ ಏರಿಕೆಯಾಗುತಲೇ ಇದೆ. ಇದೇ ವೇಳೆ, ಅವುಗಳನ್ನು ಎದುರಿಸಲು ಸರ್ಕಾರ ಕೂಡ ವಿಭಿನ್ನ ಯತ್ನಗಳನ್ನು ನಡೆಸುತ್ತಲೇ ಇದೆ. ಈ ಸರಣಿಯಲ್ಲಿ, ಕರೋನದ ಹೆಚ್ಚಿನ ಪರೀಕ್ಷೆಗಾಗಿ ಹೊಸ ಅತ್ಯಾಧುನಿಕ ಕೋಬಾಸ್-6800 ಯಂತ್ರವನ್ನು ಪರಿಚಯಿಸಲಾಗಿದ್ದು, ಇದನ್ನು ಎನ್‌ಸಿಡಿಸಿಗೆ ನೀಡಲಾಗಿದೆ. ಗುರುವಾರದಿಂದ, ಎನ್‌ಸಿಡಿಸಿ ಲ್ಯಾಬ್‌ನಲ್ಲಿ ಕೊರೊನಾ ಸ್ಯಾಂಪಲ್ ಗಳ ಪರೀಕ್ಷೆಗಳನ್ನು ಕೋಬಾಸ್-6800 ಯಂತ್ರದ ಮೂಲಕವೇ ನಡೆಸಲಾಗುತ್ತಿದೆ. ಈ ಅತ್ಯಾಧುನಿಕ ಯಂತ್ರವು 24 ಗಂಟೆಗಳಲ್ಲಿ 1200 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಈ ಯಂತ್ರದ ಮೂಲಕ ಏಕಕಾಲಕ್ಕೆ ಹಲವು ಮಾದರಿಗಳ ಪರೀಕ್ಷೆಗಳನ್ನು ನಡೆಸಬಹುದಾಗಿದ್ದು, ಇದರಿಂದ ಪೆಂಡೆನ್ಸಿ ಕೂಡ ಅಂತ್ಯವಾಗಲಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಗುರುವಾರ ಈ ಯಂತ್ರವನ್ನು ಎನ್‌ಸಿಡಿಸಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು "ಈ ಯಂತ್ರವು ರೊಬೊಟಿಕ್ಸ್ ಅನ್ನು ಹೊಂದಿರುವುದರಿಂದ, ಯಾವುದೇ ರೀತಿಯ ಸೋಂಕು ಪಸರಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಆರೋಗ್ಯ ಕಾರ್ಯಕರ್ತರಿಗೆ ಇದರಿಂದ ಯಾವುದೇ ರೀತಿಯ ಅಪಾಯವಿರುವುದಿಲ್ಲ. ಇದೆ ವೇಳೆ ಈ ಯಂತ್ರದ ಸಹಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬಹುದಾಗಿದ್ದು, ಶೀಘ್ರದಲ್ಲೇ ಇದು ಫಲಿತಾಂಶಗಳನ್ನು ಸಹ ನೀಡುತ್ತದೆ" ಎಂದು ಹೇಳಿದ್ದಾರೆ.


COBAS 6800 ಯಂತ್ರವನ್ನು ಪರೀಕ್ಷಿಸಲು ಕನಿಷ್ಠ BSL2 + ನಿಯಂತ್ರಣ ಮಟ್ಟದ ಲ್ಯಾಬ್ ಅಗತ್ಯವಿದೆ. ಆದ್ದರಿಂದ ಇದನ್ನು ಯಾವುದೇ ಯಾವುದೇ ಸಾಮಾನ್ಯ ಲ್ಯಾಬ್ ನಲ್ಲಿ ಇಡಲು ಸಾಧ್ಯವಿಲ್ಲ. ಕೋಬಾಸ್ -6800 ಯಂತ್ರವು ವೈರಲ್ ಹೆಪಟೈಟಿಸ್ ಬಿ & ಸಿ, ಎಚ್ಐವಿ, ಎಂಟಿಬಿ (ರಿಫಾಂಪಿಸಿನ್ ಮತ್ತು ಐಸೋನಿಯಾಜೈಡ್ ಪ್ರತಿರೋಧ), ಪ್ಯಾಪಿಲೋಮಾ, ಸಿಎಮ್‌ವಿ, ಕ್ಲಮೈಡಿಯ, ನೆಸೆರೆಮಿಯಾ ಮತ್ತು ಇತರೆ ಪತ್ತೆಹಚ್ಚುವಲ್ಲಿ ಸಹಕಾರಿಯಾಗಲಿದೆ.


ಗುರುವಾರದವರೆಗೆ ದೇಶಾದ್ಯಂತ ಒಟ್ಟು 20 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿಲಾಗಿದ್ದು, ಇನ್ಮುಂದೆ ಪ್ರತಿ ದಿನ ಸುಮಾರು 1 ಲಕ್ಷ ಸ್ಯಾಂಪಲ್ ಗಳ ಟೆಸ್ಟ್ ಮಾಡುವ ಸಾಮರ್ಥ್ಯ ಬಂದಿದೆ. ಸದ್ಯ ದೇಶಾದ್ಯಂತ ಒಟ್ಟು 359 ಸರ್ಕಾರಿ ಹಾಗೂ 145 ಖಾಸಗಿ ಲ್ಯಾಬ್ ಗಳಿದ್ದು, ಇವುಗಳಿಗೆ ಕೊವಿಡ್-19 ಟೆಸ್ಟ್ ನಡೆಸುವ ಸೌಲಭ್ಯ ಒದಗಿಸಲಾಗಿದೆ.


ಇದುವರೆಗೆ, ಭಾರತದಲ್ಲಿ ಒಟ್ಟು ಕರೋನಾ ಸೋಂಕಿತ ರೋಗಿಗಳ ಸಂಖ್ಯೆ 78003 ಏರಿಕೆಯಾಗಿದೆ. ಇದೆ ವೇಳೆ ಈ ಸೋಂಕಿಗೆ ಗುರಿಯಾದ ಸುಮಾರು 2549 ರೋಗಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ದೇಶಾದ್ಯಂತ 49,219 ಸಕ್ರೀಯ ರೋಗಿಗಳಿದ್ದು, ಒಟ್ಟು 26,235 ರೋಗಿಗಳು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ಸದ್ಯ ಭಾರತದಲ್ಲಿ ಚೇತರಿಕೆಯ ಪ್ರಮಾಣ ಶೇ.33.6 ರಷ್ಟಿದ್ದು, ಈ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಲೇ ಇರುವುದು ಸಮಾಧಾನಕರ ಸಂಗತಿ. ಕಳೆದ ಬುಧವಾರದವರೆಗೆ ಕೇವಲ ಶೇ.3 ರಷ್ಟು ಮಾತ್ರ ರೋಗಿಗಳು ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಶೇ.2.7 ರಷ್ಟು ಜನರು ಆಕ್ಸಿಜನ್ ಸಪೋರ್ಟ್ ನಲ್ಲಿದ್ದರೆ, 0.39 ರಷ್ಟು ರೋಗಿಗಳು ವೆಂಟಿಲೇಟರ್‌ ಗಳಲ್ಲಿದ್ದಾರೆ. ಇನ್ನೊಂದೆಡೆ ರೋಗಿಗಳ ಸಂಖ್ಯೆ ದುಪ್ಪಟ್ಟಾಗುವ ಕಾಲಾವಧಿ ಕೂಡ 13.9 ದಿನಗಳಿಗೆ ಏರಿಕೆಯಾಗಿದೆ.


ಇಂದು ದೇಶಾದ್ಯಂತ ಒಟ್ಟು 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ನ ಒಂದೇ ಒಂದು ಪ್ರಕರಣ ಕೂಡ ವರದಿಯಾಗಿಲ್ಲ. ಇವುಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಚಂಡಿಗಡ್, ದಾದ್ರಾ ಮತ್ತು ನಗರ ಹವೇಲಿ, ಗೋವಾ, ಚತ್ತೀಸ್ಗಡ, ಗುಜರಾತ್, ಜಾರ್ಖಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿ, ತೆಲಂಗಾಣ ಸೇರಿದಂತೆ ದಮನ್ ಮತ್ತು ಡಿಯು, ಸಿಕ್ಕಿಂ, ನಾಗಾಲ್ಯಾಂಡ್ ಹಾಗೂ ಲಕ್ಷದ್ವೀಪ ಶಾಮೀಲಾಗಿವೆ.