ಬ್ರುಸೆಲ್ಸ್:  ಬೆಲ್ಜಿಯಂ ನ ಬ್ರುಸೆಲ್ಸ್ ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ಜಾಗತಿಕ ಹವಾಮಾನದ ಬಗ್ಗೆ ಮಾತನಾಡಿದ ವಿದೇಶಾಂಗ್ ಸಚಿವೆ ಸುಷ್ಮಾ ಸ್ವರಾಜ್ ಹವಾಮಾನದಲ್ಲಿನ ಬದಲಾವಣೆಯನ್ನು ನಿರ್ವಹಿಸಿಸುವ ಶಕ್ತಿ ಭಾರತೀಯರ ನೀತಿ ಮೌಲ್ಯಗಳಲ್ಲೇ ಇದೆ ಎಂದು ಅವರು ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ಇಲ್ಲಿನ ಹವಾಮಾನ,ರಕ್ಷಣೆ ಮತ್ತು ಶಾಂತಿಯ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು "ಜಾಗತೀಕ ಹವಾಮಾನದ ಕುರಿತದ ಬದ್ದತೆಯು ನಮ್ಮ ನೀತಿ ಮೌಲ್ಯಗಳಲ್ಲೇ ಇದೆ.ಆದ್ದರಿಂದ ನಾವು ಪ್ರಕೃತಿಯನ್ನು ಮಾತೆ ಎಂದು ಭಾವಿಸಿದ್ದೇವೆ ಎಂದು ತಿಳಿಸಿದರು. ಇನ್ನು ಮುಂದುವರೆದು ಬಹುತೇಕ ಭಾರತೀಯ ಜನಸಂಖ್ಯೆಯು ಭೂಮಿ ತಾಯಿಯ ಮೇಲೆ ಅವಲಂಭಿತರಾಗಿದ್ದಾರೆ. ಅದು ನದಿ,ಸಮುದ್ರ, ಆಹಾರ ಆರೋಗ್ಯ ಇಂಧನ  ಎಂದು ಅವರು ತಿಳಿಸಿದರು.


ಇದೆ ಸಂದರ್ಭದಲ್ಲಿ ಜಾಗತಿಕ ಹವಾಮಾನ ಬದಲಾವಣೆ ಕುರಿತಾದ 2015 ರ ಒಪ್ಪಂದದ ಅಂಶಗಳನ್ನು ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್ ತಂತ್ರಜ್ಞಾನ ಮತ್ತು ಹಣಕಾಸು ವಿಭಾಗದಲ್ಲಿಯೂ ಸಹಿತ ಇದೇ ರೀತಿಯ ನೀಲ ನಕ್ಷೆಯನ್ನು ಸಿದ್ದಪಡಿಸಬೇಕು. ಇವುಗಳಿಲ್ಲದೆ ಸುಸ್ಥಿರ ಅಭಿವೃದ್ದಿಯ ಕುರಿತಾದ ಉದ್ದೇಶ ಮತ್ತು ಗುರಿಗಳನ್ನು ತಲುಪಲು ಅಸಾಧ್ಯ ಎಂದು ಅವರು ತಿಳಿಸಿದರು.