ನ್ಯಾಯಾಂಗ, ಮಾಧ್ಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಸರ್ಕಾರ ಬದ್ಧ- ರವಿಶಂಕರ್ ಪ್ರಸಾದ್
ದೆಹಲಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಕುರಿತಾದ ಟೀಕೆಗಳು ಬಂದಿರುವ ಹಿನ್ನಲೆಯಲ್ಲಿ ನ್ಯಾಯಾಂಗ, ಮಾಧ್ಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯಮೋದಿ ಸರ್ಕಾರದ ಮೂಲಭೂತ ಬದ್ಧತೆಗಳಲ್ಲಿ ಒಂದು ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಕುರಿತಾದ ಟೀಕೆಗಳು ಬಂದಿರುವ ಹಿನ್ನಲೆಯಲ್ಲಿ ನ್ಯಾಯಾಂಗ, ಮಾಧ್ಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯಮೋದಿ ಸರ್ಕಾರದ ಮೂಲಭೂತ ಬದ್ಧತೆಗಳಲ್ಲಿ ಒಂದು ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದ್ದಾರೆ.
ನ್ಯಾಯಮೂರ್ತಿ ಎಸ್.ಮುರಳೀಧರ್ ಅವರ ವರ್ಗಾವಣೆಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಡೆಸಿದ ವಾಗ್ದಾಳಿ ಬಗ್ಗೆ ಕೇಳಿದಾಗ, ಉತ್ತರಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ 1970 ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರವು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಹತ್ತಿಕ್ಕಿತ್ತು, ಅದು ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ಆಕ್ರಮಣವೆಂದು ಪರಿಗಣಿಸಲಾಗಿದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಮುರಳೀಧರ್ ಅವರ ವರ್ಗಾವಣೆಯೂ ಯಾವುದೇ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸಚಿವರು ಪುನರುಚ್ಚರಿಸಿದ್ದು, ಈ ಕುರಿತು ಶಿಫಾರಸು ಈಗಾಗಲೇ ಸುಪ್ರೀಂ ಕೋರ್ಟ್ ಕೊಲ್ಜಿಯಂನಿಂದ ಮಾಡಲ್ಪಟ್ಟಿದೆ ಮತ್ತು ನ್ಯಾಯಾಧೀಶರು ಸಹ ಅವರ ಒಪ್ಪಿಗೆ ನೀಡಿದ್ದಾರೆ. 'ಇದು ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿತ್ತು. ಅದೇ ಪ್ರಕ್ರಿಯೆಯ ಮೂಲಕ ಡಜನ್ಗಟ್ಟಲೆ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ' ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಮೂರ್ತಿ ಮುರಳೀಧರ್ ಅವರು ವಿಚಾರಣೆ ನಡೆಸುತ್ತಿದ್ದ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕರನ್ನು ಉಳಿಸಲು ಸರ್ಕಾರದಿಂದ ವರ್ಗಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರು ಸೇರಿದಂತೆ ಈ ಸರ್ಕಾರದ ಅನೇಕ ಹಿರಿಯ ಕಾರ್ಯಕರ್ತರು ತುರ್ತು ಪರಿಸ್ಥಿತಿಯ ವಿರುದ್ಧ ವೈಯಕ್ತಿಕ, ನ್ಯಾಯಾಂಗ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.'ಈ ಸ್ವಾತಂತ್ರ್ಯಗಳಿಗೆ ನಮ್ಮ ಸರ್ಕಾರದ ಮೂಲಭೂತ ಬದ್ಧತೆಯಾಗಿದೆ' ಎಂದು ಅವರು ಹೇಳಿದರು.