ಪುಲ್ವಾಮಾ ಭಯೋತ್ಪಾದಕ ದಾಳಿ ಬೆಂಬಲಿಸಿದ ಉದ್ಯೋಗಿ ಸಸ್ಪೆಂಡ್
ರಿಯಾಜ್ ಸೋಷಿಯಲ್ ಮೀಡಿಯಾ ಪೋಸ್ಟ್ ಗಮನಿದ ಕಂಪನಿ ಕೂಡಲೇ ಆತನನ್ನು ಸಸ್ಪೆಂಡ್ ಮಾಡಿದೆ. ಅಷ್ಟೇ ಅಲ್ಲದೆ, ಆದಷ್ಟು ಬೇಗ ಇದಕ್ಕೆ ಸೂಕ್ತ ಕಾರಣ ಮತ್ತು ಸ್ಪಷಣೆ ನೀಡುವಂತೆ ಕಂಪನಿ ಸೂಚಿಸಿದೆ.
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ CRPF ಯೋಧರ ಮೇಲೆ ಭಯೋತ್ಪಾದಕರ ಭೀಕರ ದಾಳಿಯನ್ನು ಬೆಂಬಲಿಸಿದ ಉದ್ಯೋಗಿಯನ್ನು ಮುಂಬೈನ ಖಾಸಗಿ ಔಷಧಿ ಕಂಪನಿಯೊಂದು ಅಮಾನತು ಮಾಡಿದೆ. ಅಲ್ಲದೆ, ಆತನ ಹೇಳಿಕೆಗೆ ಸ್ಪಷ್ಟನೆ ನೀಡುವಂತೆಯೂ ಸೂಚಿಸಿದೆ.
ರಿಯಾಜ್ ಅಹಮದ್ ವಾನಿ ಎಂಬ ಉದ್ಯೋಗಿ ತನ್ನ ಫೇಸ್ಬುಕ್ ಖಾತೆಯಲ್ಲಿ ಗುರುವಾರ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿ "Ataah Wanaaan Surgical Strike" ಎಂದು ಬರೆದು ಪೋಸ್ಟ್ ಮಾಡಿದ್ದ. ಇದರರ್ಥ 'ಇದನ್ನೇ ಸರ್ಜಿಕಲ್ ಸ್ಟ್ರೈಕ್ ಅನ್ನೋದು' ಎಂದು. ಇದನ್ನು ಗಮನಿಸಿದ ಕಂಪನಿಯ ಮುಂಬೈ ಮುಖ್ಯ ಕಚೇರಿ, ಈ ರೀತಿ ಪೋಸ್ಟ್ ಮಾದಿರುವುದಕೆ ಕಾರಣಗಳನ್ನು ತಿಳಿಸುವಂತೆ ಸೂಚನೆ ನೀಡಿದೆಯಲ್ಲದೆ, ಕಂಪನಿಯಿಂದ ವಜಾಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.
ಮಾಹಿತಿಯ ಪ್ರಕಾರ, ರಿಯಾಜ್ ಸೋಷಿಯಲ್ ಮೀಡಿಯಾ ಪೋಸ್ಟ್ ಗಮನಿದ ಕಂಪನಿ ಕೂಡಲೇ ಆತನನ್ನು ಸಸ್ಪೆಂಡ್ ಮಾಡಿದೆ. ಅಷ್ಟೇ ಅಲ್ಲದೆ, ಆದಷ್ಟು ಬೇಗ ಇದಕ್ಕೆ ಸೂಕ್ತ ಕಾರಣ ಮತ್ತು ಸ್ಪಷಣೆ ನೀಡುವಂತೆ ಕಂಪನಿ ಸೂಚಿಸಿದೆ. ಅಷ್ಟಕ್ಕೂ, ರಿಯಾಜ್ ಭಾರತವನ್ನು ವಿರೋಧಿಸುವ ಭರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಪೋಸ್ಟ್ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದ ಪೋಸ್ಟ್ ಗಳನ್ನೂ ಗಮನಿಸಿದರೆ ಆತ ಕಟ್ಟಾ ಪಾಕಿಸ್ತಾನಿ ಬೆಂಬಳಿಗೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಹಿಂದೆ ಪೋಸ್ಟ್ ಮಾಡಿರುವ ವಿವಾದಾತ್ಮಕ ಫೋಟೋಗಳು ಮತ್ತು ಹೇಳಿಕೆಗಳನ್ನು ಗಮನಿಸಿದರೆ ಆತನಿಗೆ ಪಾಕಿಸ್ತಾನದ ಮೇಲಿರುವ ಪ್ರೀತಿ ಸ್ಪಷ್ಟವಾಗಿ ಕಾಣುತ್ತದೆ. ಇತ್ತೀಚಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿಯೂ ಸಹ ರಿಯಾಜ್ ಪಾಕಿಸ್ತಾನಿ ಬಾವುಟದೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ, ವಿಶ್ ಮಾಡಿದ್ದ.
[[{"fid":"174834","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 44 ಯೋಧರು ಹುತಾತಮ್ರಾಗಿದ್ದರು. ಇವರಲ್ಲಿ 40 ಯೋಧರನ್ನು ಅವರ ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ಪತ್ರಗಳ ಆಧಾರದ ಮೇಲೆ ಗುರುತಿಸಿ ಪಾರ್ಥಿವ ಶರೀರಗಳನ್ನು ಅವರವರ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮೃತ ಯೋಧರ ಕುಟುಂಬಗಳಿಗೆ ಉದ್ಯೋಗ ಮತ್ತು ಆರ್ಥಿಕ ನೆರವು ನೀಡುವುದಾಗಿಯೂ ಕೇಂದ್ರ ಸರ್ಕಾರ ಘೋಷಿಸಿದೆ.