ಐಜಾವ್ಲ್: ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ದೃಷ್ಟಿಯಿಂದ ಮಿಜೋರಾಂ (Mizoram) ಸರ್ಕಾರವು ಹೆಚ್ಚುವರಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಬಿಡುಗಡೆ ಮಾಡಿದೆ. ಇದನ್ನು ರಾಜ್ಯದ ಪ್ರತಿಯೊಂದು ಕಾರ್ಯದಲ್ಲೂ ಅನುಸರಿಸಲಾಗುವುದು. ಈ ಎಸ್‌ಒಪಿ ಉದ್ದೇಶ ಸಾಮಾಜಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.


COMMERCIAL BREAK
SCROLL TO CONTINUE READING

ಉನ್ನತ ಅಧಿಕಾರಿಗಳು, ಎನ್‌ಜಿಒಗಳು, ಚರ್ಚುಗಳು ಮತ್ತು ವೈದ್ಯರೊಂದಿಗೆ ಬುಧವಾರ ನಡೆದ ಸಭೆಯ ನಂತರ ಮುಖ್ಯಮಂತ್ರಿ ಜೋರಮ್‌ಥಂಗಾ ಗುರುವಾರ ಈ ಆದೇಶ ಹೊರಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಅಮೆರಿಕನ್ನರಿಗೆ ಅತಿದೊಡ್ಡ ಪರಿಹಾರ, ಎಲ್ಲಾ ನಾಗರಿಕರಿಗೂ ಉಚಿತವಾಗಿ ಸಿಗಲಿದೆ ಕರೋನಾ ಲಸಿಕೆ


ಮದುವೆ ಸಮಾರಂಭ, ಅಂತ್ಯಕ್ರಿಯೆ, ವಾರ್ಷಿಕೋತ್ಸವ ಆಚರಣೆಗಳು ಮತ್ತು ಇನ್ನಿತರ ಯಾವುದೇ ಸಮಾರಂಭಗಳಿಗೆ 50ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲು ಅನುಮತಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವೃದ್ಧರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಅದು ಹೇಳಿದೆ.


'ಜೈಖವಂ' ಎಂಬ ಆದೇಶದ ಪ್ರಕಾರ ಅಂತ್ಯಕ್ರಿಯೆಯ ನೆನಪಿಗಾಗಿ ಗುಂಪುಗಳಲ್ಲಿ ಹಾಡುಗಳನ್ನು ಹಾಡುವ ಅಥವಾ ವಿವಾಹ ಸಮಾರಂಭಗಳಲ್ಲಿ ಒಟ್ಟುಗೂಡಿ ಹಾಡುಗಳನ್ನು ಹಾಡುವ ಅಭ್ಯಾಸವನ್ನು ನಿಷೇಧಿಸಲಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಅದು ಹೇಳಿದೆ.  


ಕರೋನಾ: ನೆರೆಹೊರೆಯ ದೇಶದಲ್ಲಿ ಓರ್ವ ಪ್ರಯಾಣಿಕನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿ


ಗಮನಾರ್ಹವಾಗಿ ಆಗಸ್ಟ್ 13ರವರೆಗೆ ಮಿಜೋರಾಂನಲ್ಲಿ 649 ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 319 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 330 ಜನರು ಚೇತರಿಕೆ ಕಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.