ನವದೆಹಲಿ: ದೆಹಲಿ ಚುನಾವಣೆಗಳ ಅಂತಿಮ ಫಲಿತಾಂಶಗಳಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್ ಮುಖಂಡೆ ಅಲ್ಕಾ ಲಂಬಾ, ಫಲಿತಾಂಶಗಳಿಗೆ ಹಿಂದೂ-ಮುಸ್ಲಿಂ ಟ್ವಿಸ್ಟ್ ನೀಡಿದ್ದಾರೆ. ಈ ಫಲಿತಾಂಶಗಳಲ್ಲಿ ಸಿಕ್ಕ ಹೀನಾಯ ಸೋಲಿಗೆ ಪ್ರತಿಕ್ರಿಯೆ ನೀಡಿರುವ ಅವರು, ಜನರ ತೀರ್ಪನ್ನು ಒಪ್ಪಿಕೊಂಡಿರುದಾಗಿ ಹೇಳಿದ್ದಾರೆ. ಇದೇವೇಳೆ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಅವರು ಈ ಬಾರಿಯ ಚುನಾವಣೆಗಳಲ್ಲಿ ಹಿಂದೂ-ಮುಸ್ಲಿಂ ಮತಗಳ ಸಂಪೂರ್ಣ ಧ್ರುವೀಕರಣ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಪಕ್ಷಕ್ಕೆ ನೂತನ ನೇತೃತ್ವದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಲ್ಕಾ ಲಾಂಬಾ "ನಾನು ಜನರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುವೆ. ಆದರೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹಿಂದೂ-ಮುಸ್ಲಿಂ ಮತಗಳ ಸಂಪೂರ್ಣ ಧ್ರುವೀಕರಣ ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ನೂತನ ನೇತೃತ್ವದ ಅವಶ್ಯಕತೆ ಇದ್ದು ಜೊತೆಗೆ ಹೊಸದಾಗಿ ಹೋರಾಟ ಪ್ರಾರಂಭಿಸಬೇಕು" ಎಂದು ಸಲಹೆ ನೀಡಿದ್ದಾರೆ. ಜೊತೆಗೆ "ದೆಹಲಿ ಜನರೂ ಕೂಡ ದೀರ್ಘ ಕಾಲದ ಹೋರಾಟಕ್ಕೆ ಸಿದ್ಧರಾಗಬೇಕಿದ್ದು, ಇಂದು ಹೋರಾಟ ನಡೆಸಿದರೆ, ನಾಳೆ ಗೆಲುವು ಕೂಡ ನಮ್ಮದಾಗಲಿದೆ" ಎಂದಿದ್ದಾರೆ.



ಮಧ್ಯಾಹ್ನ 1.45ರವರೆಗೆ ಬಂದ ಫಲಿತಾಂಶದ ಪ್ರಕಾರ ಅಲ್ಕಾ ಲಂಬಾ ಕೇವಲ 1684 ಮತಗಳನ್ನು ಮಾತ್ರ ಗಳಿಸಲು ಶಕ್ತರಾಗಿದ್ದಾರೆ. ಅಂದರೆ, ಇಡೀ ವಿಧಾನಸಭಾ ಕ್ಷೇತ್ರದ ಶೇ.4.82ರಷ್ಟು ಮತವನ್ನು ಮಾತ್ರ ಗಳಿಸುವಲ್ಲಿ ಅವರು ಶಕ್ತರಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಪ್ರಹ್ಲಾದ್ ಸಿಂಗ್ ಸಹಾನಿ 26938 ಗಳಿಸುವ ಮೂಲಕ ಭಾರಿ ಮುನ್ನಡೆ ಸಾಧಿಸಿದ್ದಾರೆ. ಇನ್ನೊಂದೆಡೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಪಿಯ ಅಭ್ಯರ್ಥಿ ಸುಮನ್ ಕುಮಾರ್ ಗುಪ್ತಾ 9634 ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.