COMMERCIAL BREAK
SCROLL TO CONTINUE READING

ನವದೆಹಲಿ: ಕಳೆದ 70 ವರ್ಷಗಳಲ್ಲಿ ಈ ದೇಶಕ್ಕೆ ಕಾಂಗ್ರೇಸ್ ಮಾಡಿದ್ದೇನು ಎನ್ನುವ ಪ್ರಧಾನಿ ಮೋದಿಯವರ ಪ್ರಶ್ನೆಗೆ ಕಾಂಗ್ರೇಸ್ ತನ್ನ 70 ವರ್ಷಗಳ ಸಾಧನೆಯನ್ನು ಬಿಂಬಿಸುವ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದೆ. 



ಈ ವಿಡಿಯೋ ಬಿಡುಗಡೆ ಮಾಡಿ "ಕಳೆದ 70 ವರ್ಷಗಳಲ್ಲಿ ಕಾಂಗ್ರೇಸ್ ಮಾಡಿದ್ದೇನು? ಈ ವಿಡಿಯೋ ವಿಶೇಷವಾಗಿ ಮೋದಿಜಿಯವರಿಗೆ ಸಮರ್ಪಣೆ ಮಾಡಲಾಗುತ್ತಿದೆ. 


ಇನ್ನೊಂದು ವಿಡಿಯೋ ಸಧ್ಯದಲ್ಲೇ  ನಿಮಗಾಗಿ ಬರುತ್ತದೆ ಸರ್ ,ಏಕೆಂದರೆ ನೀವು ವಿಶೇಷ ವ್ಯಕ್ತಿ ನಿಮಗೆ ಈ ಒಂದು ವಿಡಿಯೋ ಸಾಲುವುದಿಲ್ಲ" ಎಂದು ಟ್ವೀಟ್ ಮೂಲಕ ಕಾಂಗ್ರೇಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ಪ್ರಶ್ನೆಗೆ ಉತ್ತರಿಸಿದೆ.