ನವದೆಹಲಿ: ಬಿಜೆಪಿಯು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಕುದುರೆ ವ್ಯಾಪಾರವನ್ನು ಕೈಗೊಂಡಿದ್ದನ್ನು ತನಿಖೆಗೆ ಒಳಪಡಿಸಬೇಕೆಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಜೈವಿರ್ ಶೇರ್ ಗಿಲ್ ಮಾತನಾಡುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಟ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದ ಹಿನ್ನಲೆಯಲ್ಲಿ ತನಿಖೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಭ್ರಷ್ಟಾಚಾರಲ್ಲಿ ಶಾಸಕರು ಭಾಗಿಯಾಗಿರುವ ಹಿನ್ನಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ತನಿಖೆ ನಡೆಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಶೆರ್ಗಿಲ್  ತಿಳಿಸಿದ್ದಾರೆ.


ಈ ಆರೋಪವು ಪ್ರಮುಖವಾಗಿ ಬಿಜೆಪಿಯು ವಿಶ್ವಾಸಮತಗಳಿಸಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ವಿಶ್ವಾಸಮತದ ದಿನಕ್ಕೂ ಮೊದಲು ಬಿಜೆಪಿ ನಾಯಕರ ಪೋನ್ ಸಂಭಾಷಣೆಯನ್ನು ಒಳಗೊಂಡ ಕ್ಲಿಪ್ ಗಳನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ  ಬಳ್ಳಾರಿಯ ಜನಾರ್ಧನ್ ರೆಡ್ಡಿಯವರು ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ ಒಡ್ಡಿದ್ದರು ಎಂದು  ಫೋನ್ ರೀಕಾರ್ಡಿಂಗ್ ಬಿಡುಗಡೆ ಮಾಡುವುದರ ಮೂಲಕ ಆರೋಪಿಸಿತ್ತು.