Gujarat Assembly Election : ಗುಜರಾತ್ ನಲ್ಲಿ ಸತತ ಏಳನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಂಧಿಧಾಮದ ಕಾಂಗ್ರೆಸ್ ಅಭ್ಯರ್ಥಿ ಭಾರತ್ ಸೋಲಂಕಿ  ಮತ ಎಣಿಕೆ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಿಜೆಪಿ ಇವಿಎಂ ಟ್ಯಾಂಪರಿಂಗ್ ಮಾಡಿದೆ ಎಂದು ಭರತ್ ಸೋಲಂಕಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಗುಜರಾತ್ ನಲ್ಲಿ  ಇತಿಹಾಸ ಸೃಷ್ಟಿಸಿದ ಬಿಜೆಪಿ : 
ಈ ಮಧ್ಯೆ, ಕೇಸರಿ ಪಕ್ಷವು ಭಾರೀ ಅಂತರದಿಂದ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಲಿದೆ ಎಂಬುದಕ್ಕೆ ಪ್ರಸ್ತುತ ಟ್ರೆಂಡ್ ಸಾಕ್ಷಿಯಾಗಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಹೇಳಿದ್ದಾರೆ. ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಈ ಫಲಿತಾಂಶ ತೋರಿಸುತ್ತದೆ ಎಂದು ಹೇಳಿದ್ದಾರೆ.  


ಇದನ್ನೂ ಓದಿ : Himachal Pradesh Assembly Election 2022: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲಲು ಕಾರಣವೇನು ಗೊತ್ತೇ?


 ಈ ಸುದ್ದಿ ಬರೆಯುವ ಹೊತ್ತಿಗೆ ಗುಜರಾತ್‌ನ 182 ಸ್ಥಾನಗಳ ಪೈಕಿ ಬಿಜೆಪಿ 158ರಲ್ಲಿ ಮುಂದಿದ್ದು, ಎರಡು ಸ್ಥಾನಗಳನ್ನು ಗೆದ್ದಿದೆ. 2002ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾದಾಗ 127 ಸ್ಥಾನಗಳನ್ನು ಗೆದ್ದುಕೊಂಡು ಮಾಡಿದ್ದ ದಾಖಲೆಯನ್ನು ಮುರಿದಿದೆ. ಈ ಹಿಂದೆ 1985ರಲ್ಲಿ ಮಾಧವ್ ಸಿಂಗ್ ಸೋಲಂಕಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು.


ಬಿಜೆಪಿ 1995ರಿಂದ ರಾಜ್ಯದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದಂತಾಗುತ್ತದೆ. 


ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್‌ ದಾಖಲೆ ಮುರಿದ ಬಿಜೆಪಿ!


ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಗುರುವಾರ ಬೆಳಗ್ಗೆ ರಾಜ್ಯದ 37 ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯೊಂದಿಗೆ ಆರಂಭವಾಯಿತು.   ಭಾರತೀಯ ಚುನಾವಣಾ ಆಯೋಗ ನೇಮಿಸಿದ ವೀಕ್ಷಕರ ಉಪಸ್ಥಿತಿಯ ನಡುವೆಯೇ ಮತ ಎಣಿಕೆ ನಡೆಯಿತು. 


ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಸತತ ಏಳನೇ ಅವಧಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವ ಮುನ್ಸೂಚನೆ ನೀಡಿತ್ತು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.