ನವದೆಹಲಿ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.


COMMERCIAL BREAK
SCROLL TO CONTINUE READING

ಈಗ ಕೇಂದ್ರ ಸಚಿವ ಅಕ್ಬರ್ ಮೇಲೆ ಬಂದಿರುವ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ " ಕೇಂದ್ರ ಸಚಿವರು ಈ ಆರೋಪಗಳಿಗೆ ತೃಪ್ತಿದಾಯಕ ಉತ್ತರಗಳನ್ನು ನೀಡಬೇಕು ಇಲ್ಲವೇ ರಾಜಿನಾಮೆ ನೀಡಬೇಕು.ಅಲ್ಲದೆ ಈ ವಿಚಾರವಾಗಿ ಸುದೀರ್ಘ ತನಿಖೆಯನ್ನು ನಡೆಸಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


ಇನ್ನೊಂದೆಡೆ ಕಾಂಗ್ರೆಸ್ ವಕ್ತಾರ್ ಮನೀಶ್ ತಿವಾರಿ ಮಾತನಾಡಿ"ಸಚಿವರ ಮೇಲೆ ಬಂದಿರುವ ಆರೋಪಕ್ಕೆ ಮೌನವು ಆಯ್ಕೆಯಲ್ಲ.ಇದು ಗಂಭೀರ ವಿಷಯವಾಗಿದೆ.ಆದ್ದರಿಂದ ಸಚಿವರು  ಮಾತನಾಡುವ ಅಗತ್ಯವಿದೆ, ಪ್ರಧಾನಿಗಳು ಕೂಡ ವಿಚಾರವಾಗಿ ಮಾತನಾಡಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ಮನೀಶ್ ತಿವಾರಿ ತಿಳಿಸಿದ್ದಾರೆ.


ಇತ್ತ ಬಿಜೆಪಿ ಈ ವಿಚಾರವಾಗಿ ಮಾತನಾಡಲು ನಿರಾಕರಿಸಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಬಳಿ ಸಚಿವರ ಮೇಲಿನ ಲೈಂಗಿಕ ಆರೋಪದ ಬಗ್ಗೆ ಕೇಳಿದಾಗ ಅವರು ಇದಕ್ಕೆ ಉತ್ತರಿಸಲು ನಿರಾಕರಿಸಿ ತಾವು ಗುಜರಾತಿನಲ್ಲಿ ವಲಸಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ಕಾಂಗ್ರೆಸ್ ಪಾತ್ರದ ಕುರಿತಾಗಿ ಮಾತನಾಡಲು ಬಂದಿರುವುದಾಗಿ ತಿಳಿಸಿದರು.