ರಾಜಸ್ತಾನದಲ್ಲಿ ವಸುಂಧರಾ ರಾಜೇ ವಿರುದ್ದ ಜಸ್ವಂತ್ ಸಿಂಗ್ ಪುತ್ರ ಮನ್ವೆಂದ್ರ ಕಣಕ್ಕೆ
ಝಾಲ್ರಾಪತನ್ ಕ್ಷೇತ್ರದಲ್ಲಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೆಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.ಈ ಮೂಲಕ ಕಾಂಗ್ರೆಸ್ ಪ್ರತಿಷ್ಠಿತ ಯುದ್ಧಕ್ಕೆ ವೇದಿಕೆಯನ್ನು ನಿಗದಿಪಡಿಸಿದೆ.
ನವದೆಹಲಿ: ಝಾಲ್ರಾಪತನ್ ಕ್ಷೇತ್ರದಲ್ಲಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೆಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.ಈ ಮೂಲಕ ಕಾಂಗ್ರೆಸ್ ಪ್ರತಿಷ್ಠಿತ ಯುದ್ಧಕ್ಕೆ ವೇದಿಕೆಯನ್ನು ನಿಗದಿಪಡಿಸಿದೆ.
ರಾಜಸ್ತಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈಗ ಕಾಂಗ್ರೆಸ್ ಘೋಷಿಸಿದ 32 ಹೆಸರುಗಳಲ್ಲಿ ಮನ್ವೇಂದ್ರ ಸಿಂಗ್ ಅವರು ಹೆಸರು ಝಾಲ್ರಾಪತನ್ ಕ್ಷೇತ್ರದಲ್ಲಿ ಕೇಳಿಬಂದಿದೆ.
ಬಾರ್ಮರ್ ಜಿಲ್ಲೆಯ ಶಿಯೋ ಶಾಸಕರಾಗಿರುವ ಮನ್ವೇಂದ್ರ ಅವರು ಕಳೆದ ತಿಂಗಳು ಬಿಜೆಪಿಯನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಆಗ ಬಿಜೆಪಿ ಪಕ್ಷವು ತಮ್ಮ ತಂದೆ ಜಸ್ವಂತ್ ಸಿಂಗ್ ರನ್ನು ಅಗೌರವದಿಂದ ಕಂಡಿದೆ ಎಂದು ಅವರು ಬಿಜೆಪಿ ವಿರುದ್ದ ಕಿಡಿಕಾರಿದ್ದರು.
ಜಸ್ವಂತ್ ಸಿಂಗ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾರ್ಮರ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಬಿಜೆಪಿಯೊಂದಿಗೆ ನಾಲ್ಕು ದಶಕಗಳ ಸಂಬಂಧವನ್ನು ಕೊನೆಗೊಳಿಸಿದ್ದರು.