ಭೂಪಾಲ್: ಮಧ್ಯಪ್ರದೇಶದ ಚಿತ್ರಕೂಟದ  ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ನೀಲಾಂಸು ಚತುರ್ವೇಧಿ 14,133 ಮತಗಳ ಅಂತರದಿಂದ ಗೆಲುವಿನ ಪತಾಕೆ ಹಾರಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಅಭ್ಯರ್ಥಿ ನೀಲನ್ಸು ಚತುರ್ವೇದಿ ತನ್ನ ಎದುರಾಳಿ ಭಾರತೀಯ ಜನತಾ ಪಕ್ಷದ ಶಂಕರ್ ದಯಾಳ್ ತ್ರಿಪಾಠಿ ಅವರನ್ನು 14,133 ಮತಗಳ ಅಂತರದಲ್ಲಿ ಸೋಲಿಸಿದರು. ಬಿಜೆಪಿಯ ತ್ರಿಪಾಠಿ ಅವರು 52,677 ಮತಗಳನ್ನು ಗಳಿಸಿದ್ದರೆ, ಕಾಂಗ್ರೇಸ್ ನ ಚತುರ್ವೇದಿ 66,810 ಮತಗಳನ್ನು ಗಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಚತುರ್ವೇಧಿ 19 ಸುತ್ತುಗಳ ಎಣಿಕೆಯ ನಂತರ ವಿಜೇತ ಎಂದು ಘೋಷಿಸಲ್ಪಟ್ಟರು. 


ಒಟ್ಟು 12 ಅಭ್ಯರ್ಥಿಗಳು ಈ ಉಪ ಚುನಾವಣಾ ಕಣದಲ್ಲಿದ್ದರು. ಅದರಲ್ಲಿ 9 ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.


ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಯಿಸಿರುವ ಕಾಂಗ್ರೇಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ "ದೇಶದೆಲ್ಲೆಡೆ ಬದಲಾವಣೆಯ ಗಾಳಿ ಬೀಸುತ್ತಿದೆ"ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.