ಚಿತ್ತೋರ್ಘರ್: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಭಾರೀ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಷ್ಟ್ರಾದ್ಯಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ತೊರ್ಘಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಷಾ, ರಾಜಸ್ಥಾನದಲ್ಲಿ ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದರು. 


"ಕಾಂಗ್ರೆಸ್ ಗೆ ನಾಯಕ, ನೀತಿ ಅಥವಾ ತತ್ವ ಸಿದ್ಧಾಂತ ಯಾವುದೂ ಇಲ್ಲ. ನಿಮ್ಮ ಪಕ್ಷದ ನಾಯಕನ ಹೆಸರು ಬಹಿರಂಗಪಡಿಸಿ ಎಂದು ನಾನು ಪದೇಪದೇ ಹೇಳುತ್ತಿದ್ದೇನೆ. ಆದರೆ ಅವರು ಯಾವುದನ್ನೂ ಹೇಳುತ್ತಿಲ್ಲ. ಒಂದು ಕಡೆ ದೇಶಭಕ್ತರ ಗುಂಪಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವವಿದ್ದರೆ, ಮತ್ತೊಂದು ಕಡೆ ನಾಯಕನಿಲ್ಲದ ಪಕ್ಷವೊಂದು ಸಿದ್ಧಾಂತ, ನೀತಿ ಇಲ್ಲದೆ ಮುನ್ನಡೆಯುತ್ತಿದೆ ಎಂದರು.


ಮುಂದುವರೆದು ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿದ್ದರೆ, ಕಾಂಗ್ರೆಸ್ ಮತಕ್ಕೋಸ್ಕರ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್ ಪಕ್ಷದವರು ಸರ್ಜಿಕಲ್ ಸ್ಟ್ರೈಕ್ ನಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.