ನವದೆಹಲಿ: ಬಿಜೆಪಿ ಸರ್ಕಾರ ರಚನೆಗೆ ಸಿದ್ದತೆ ನಡೆಸಿರುವ ಬೆನ್ನಲ್ಲೇ ಈಗ ಶಿವಸೇನಾ ಕಾಂಗ್ರೆಸ್ ಮಹಾರಾಷ್ಟ್ರದ ವೈರಿಯಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಮಾತನಾಡಿರುವ ಶಿವಸೇನಾ ವಕ್ತಾರ ಸಂಜಯ ರೌತ್ ' ಕಾಂಗ್ರೆಸ್ ಮಹಾರಾಷ್ಟ್ರದ ವೈರಿಯಲ್ಲ. ಎಲ್ಲ ಪಕ್ಷಗಳು ಕೆಲವು ವಿಚಾರಗಳ ಮೇಲೆ ವ್ಯತ್ಯಾಸವನ್ನು ಹೊಂದಿರುತ್ತವೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಸರ್ಕಾರ ರಚನೆಗೆ ಯಾರೂ ಮುಂದಾಗದಿದ್ದಲ್ಲಿ ಅದರ ಹೊಣೆಯನ್ನು ಶಿವಸೇನಾ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. 



ಇನ್ನೊಂದೆಡೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಮಾತನಾಡಿ ' ಒಂದು ವೇಳೆ ಶಿವಸೇನಾ ಬಿಜೆಪಿ ವಿರುದ್ಧವಾಗಿ ಮತ ಹಾಕಿದಲ್ಲಿ, ಎನ್ಸಿಪಿ ಪರ್ಯಾಯ ಸರ್ಕಾರ ರಚನೆಗೆ ಚಿಂತಿಸಲಿದೆ ಎಂದು ಹೇಳಿದರು.  



ಈಗ ಸೋಮವಾರದೊಳಗೆ ವಿಧಾನಸಭೆಯಲ್ಲಿ ಪಕ್ಷದ ಬಹುಮತವನ್ನು ಸಾಬೀತುಪಡಿಸಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರ ಆಹ್ವಾನವನ್ನು ಚರ್ಚಿಸಲು ಬಿಜೆಪಿ ಕೋರ್ ಸಮಿತಿ ಭಾನುವಾರ ಸಭೆ ಸೇರಲಿದೆ. ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆಯೊಂದಿಗೆ 15 ದಿನಗಳ ಕಾಲದ ಬಿಕ್ಕಟ್ಟಿನ ನಂತರ, ರಾಜ್ಯಪಾಲರು ಶನಿವಾರ ಸಂಜೆ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಸರ್ಕಾರ ರಚನೆಗೆ ಕಾರ್ಯವನ್ನು ಬಿಜೆಪಿ ಚುರುಕುಗೊಳಿಸಿದೆ. ಇನ್ನೊಂದೆಡೆಗೆ ವಿರೋಧ ಪಕ್ಷಗಳು ಶಿವಸೇನಾ ನಡೆಯನ್ನು ಎದುರು ನೋಡುತ್ತಿವೆ ಎನ್ನಲಾಗಿದೆ.