ನವದೆಹಲಿ: ಇಂದು ಗುಜರಾತಿನ ಸುರೇಂದ್ರನಗರದಲ್ಲಿ ನಡೆದ ಜನ ಆಕ್ರೋಶ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಮಾತನಾಡುತ್ತಿದ್ದ ವೇಳೆ ಅವರ ಕೆನ್ನೆಗೆ ತರುಣ್ ಗಜ್ಜರ್ ಎನ್ನುವ ವ್ಯಕ್ತಿ ಬಾರಿಸಿದ್ದಾನೆ.ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ವೇದಿಕೆಗೆ ಆಗಮಿಸಿದ ವ್ಯಕ್ತಿ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದಾನೆ.ಈಗ ಕ್ರಮವನ್ನು ಸಮರ್ಥಿಸಿಕೊಂಡಿರುವ ಆ ವ್ಯಕ್ತಿ ಪಾಟಿದಾರ್ ಆಂದೋಲನವು ತನ್ನ ಪತ್ನಿ ಹಾಗೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬಿರಿತು ಎಂದು ಹೇಳಿದ್ದಾನೆ.



ಈ ಘಟನೆ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಗೆ ಮಾತನಾಡಿದ ಆ ವ್ಯಕ್ತಿ " ಪಾಟೀದಾರ ಚಳುವಳಿ ನಡೆದಾಗ ನನ್ನ ಪತ್ನಿ ಗರ್ಭಿಣಿಯಾಗಿದ್ದಳು.ಆಗ ನಾನು ಸಾಕಷ್ಟು ಸಮಸ್ಯೆಯನ್ನು ಎದುರಿಸಿದೆ.ಆದ್ದರಿಂದ ಆಗನಿಂದಲೂ ನಾನು ಈ ವ್ಯಕ್ತಿಗೆ ಹೊಡೆಯಲು ನಿರ್ಧರಿಸಿದೆ. ನಾನು ಅವರಿಗೆ ಹೇಗಾದರೂ ಪಾಠ ಕಲಿಸಬೇಕಾಗಿತ್ತು ಎಂದು ಹೇಳಿದರು.


"ಚಳುವಳಿ ವೇಳೆ ಅಹಮದಾಬಾದ್ ನಲ್ಲಿ ನಡೆದ ರ್ಯಾಲಿಯಲ್ಲಿ ಸಂದರ್ಭದಲ್ಲಿ ನನ್ನ ಮಗುವಿಗೆ ಔಷಧ ತರಲು ಹೋದಾಗ ಎಲ್ಲವು ಮುಚ್ಚಲಾಗಿತ್ತುತು, ಅಂಗಡಿ, ರಸ್ತೆಗಳನ್ನು ಮುಚ್ಚಿದರು, ಅವರಿಗೆ ಬೇಕಾದಾಗೆಲ್ಲಾ ಗುಜರಾತ್  ನ್ನು ಮುಚ್ಚಲು ಅವನ್ಯಾರು ? ಅವನೇನು ಗುಜರಾತಿನ ಹಿಟ್ಲರಾ? ಎಂದು ಪ್ರಶ್ನಿಸಿದರು.