ನವದೆಹಲಿ: ಕಾಂಗ್ರೆಸ್ ಪಕ್ಷವು ವಲಸೆಗಾರರಿಗೆ ವ್ಯವಸ್ಥೆ ಮಾಡಿದ ಬಸ್ ಗಳಿಗೆ ಅನುಮತಿ ನೀಡದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

'ನೀವು ಈ ಬಸ್ಸುಗಳನ್ನು ಓಡಿಸಲು ಅನುಮತಿಸಿದ್ದರೆ, ಸುಮಾರು 72,000 ಜನರು ಈಗ ಮನೆಗೆ ಹೋಗುತ್ತಿದ್ದರು. ಆದರೆ ಅವರು ರಾಜಕೀಯ ಮಾಡುವುದರಲ್ಲಿ ತೊಡಗಿದ್ದರು. ನಿನ್ನೆ ದಿನದಿಂದ ಬಸ್ಸುಗಳು ರಾಜಸ್ಥಾನ-ಉತ್ತರ ಪ್ರದೇಶ ಗಡಿಯಲ್ಲಿ ನಿಂತಿವೆ ಮತ್ತು ಯಾವುದೇ ಸಹಾಯವಾಗುತ್ತಿಲ್ಲ ”ಎಂದು ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದರು.


ಕಾಂಗ್ರೆಸ್ ಸಕಾರಾತ್ಮಕ ರೀತಿಯಲ್ಲಿ ಸಹಾಯ ಮಾಡಲು ಬಯಸಿದೆ ಮತ್ತು ಈ ಸಂದರ್ಭದಲ್ಲಿ ರಾಜಕೀಯ ಮಾಡಲು ಇಚ್ಚಿಸುವುದಿಲ್ಲ ಎಂದರು ."ಈ ಬಸ್ಸುಗಳು ಉತ್ತರ ಪ್ರದೇಶವನ್ನು ಪ್ರವೇಶಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ" ಎಂದು ಅವರು ಮುಖ್ಯಮಂತ್ರಿಯನ್ನು ಉದ್ದೇಶಿಸಿ ಹೇಳಿದರು. "ಇದು ರಾಜಕೀಯವನ್ನು ಆಡುವ ಸಮಯವಲ್ಲ, ಎಲ್ಲಾ ಪಕ್ಷಗಳು ರಾಜಕೀಯವನ್ನು ಬದಿಗಿಟ್ಟು ಜನರಿಗೆ ಸಹಾಯ ಮಾಡಬೇಕು' ಎಂದು ಮನವಿ ಮಾಡಿದರು. ಬುಧವಾರ ಸಂಜೆ 4 ಗಂಟೆಯವರೆಗೆ ಬಸ್ಸುಗಳು ಉತ್ತರ ಪ್ರದೇಶದ ಗಡಿಯಲ್ಲಿ ಉಳಿಯಲಿವೆ ಎಂದು ಅವರು ತಿಳಿಸಿದರು.


ಉತ್ತರಪ್ರದೇಶದಲ್ಲಿ ವಲಸಿಗರನ್ನು ಸಾಗಿಸಲು 1,000 ಬಸ್ಸುಗಳನ್ನು ಕಳುಹಿಸುವ ಯೋಜನೆಯ ಬಗ್ಗೆ ಪ್ರಿಯಾಂಕಾ ಗಾಂಧಿ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ನಡುವೆ ಈಗ ಮಾತಿನ ವಾಗ್ದಾಳಿ ನಡೆಯುತ್ತಿವೆ.