ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ ಕಂಡು ನೋವಾಗಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Russia Ukraine war: ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ ನೋಡಿ ತುಂಬಾ ನೋವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: ರಷ್ಯಾ-ಉಕ್ರೇನ್ ಸಮರ (Russia-Ukraine war) ಮುಂದುವರೆದಿದೆ. ದಿನೆ ದಿನೇ ದಾಳಿ ತೀವ್ರವಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮುಂಬರುವ ದಿನಗಳಲ್ಲಿ ವಿಶ್ವಯುದ್ಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ತಕ್ಷಣವೇ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಬೇಕೆಂದ ಉಕ್ರೇನ್..!
ಸೋಮವಾರ, ಬೆಲಾರೂಸ್ (Belarus) ರಷ್ಯಾದ ಪಡೆಗಳೊಂದಿಗೆ ಯುದ್ಧಕ್ಕೆ ಸೇರುವ ಕುರಿತು ಮಾತನಾಡಿದೆ, ಆದರೆ ಉಕ್ರೇನ್ ಲಾಟ್ವಿಯಾದ (Latvia) ಬೆಂಬಲ ಪಡೆಯುತ್ತಿದೆ.
ಈ ಎಲ್ಲದರ ಮಧ್ಯೆ 16 ಸಾವಿರ ಭಾರತೀಯರು ಉಕ್ರೇನ್ ನಲ್ಲಿ (Ukraine) ಸಿಲುಕಿಕೊಂಡಿದ್ದಾರೆ. ಅವರನ್ನು ತಾಯ್ನಾಡಿಗೆ ಕರೆ ತರಲು ಆಪರೇಷನ್ ಗಂಗಾ ಕಾರ್ಯಾಚರಣೆ ನಡೆದಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Radhe Shyam: 'ರಾಧೆ ಶ್ಯಾಮ್' ಚಿತ್ರತಂಡ ಸೇರಿದ ಸೆಂಚುರಿ ಸ್ಟಾರ್ ಶಿವರಾಜಕುಮಾರ್
"ಭಾರತೀಯ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಹಿಂಸೆ, ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು (Video Viral) ಅವರ ಪೋಷಕರು ನೋಡಬೇಕಾದ ಸ್ಥಿತಿ ಬಂದಿರುವುದನ್ನು ನೋಡಿ ತುಂಬಾ ನೋವಾಗಿದೆ. ಯಾವ ಪೋಷಕರಿಗೂ ಇಂಥ ಸ್ಥಿತಿ ಬರಬಾರದು. ಸ್ಥಳಾಂತರ ಯೋಜನೆಯ ವಿಸ್ತೃತ ಮಾಹಿತಿಯನ್ನು ಕೇಂದ್ರ ಸರ್ಕಾರವು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಜತೆ ಹಂಚಿಕೊಳ್ಳಬೇಕು. ನಾವು ನಮ್ಮದೇ ಜನರನ್ನು ಕೈಬಿಡಲಾಗದು" ಎಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.