Congress President: ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆ ಬೆಂಬಲಿಸಿ ಸೋನಿಯಾ ಭೇಟಿಯಾದ ಶಶಿ ತರೂರ್
Congress News: ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆಯನ್ನು ಒತ್ತಿ ಹೇಳುವ ಪೋಸ್ಟ್ ಅನ್ನು ಬೆಂಬಲಿಸಿದ್ದ ಪಕ್ಷದ ಹಿರಿಯ ಮುಖಂಡ ಶಶಿ ತರೂರ್ ಇಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಕುರಿತು ಅವರು ಮೌನಕ್ಕೆ ಶರಣಾಗಿದ್ದಾರೆ.
Shashi Tharoor Meets Sonia Gandhi - ಕಾಂಗ್ರೆಸ್ ನಾಯಕ ಶಶಿ ತರೂರ್ ಇಂದು ದೆಹಲಿಯ 10 ಜನಪಥ್ ನಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸುಧಾರಣೆಗೆ ಒತ್ತಾಯಿಸುವ ಪೋಸ್ಟ್ ಅನ್ನು ಬೆಂಬಲಿಸಿದ್ದ ನಂತರ ತರೂರ್ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾಯಿತರಾದರೆ ‘ಉದಯಪುರ ಘೋಷಣೆ’ಗೆ ಸಂಪೂರ್ಣ ಬದ್ಧನಾಗಿರಲು ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ತಿರುವನಂತಪುರಂನಿಂದ ಕಾಂಗ್ರೆಸ್ ಸಂಸದರಾಗಿರುವ ತರೂರ್, ಸುಧಾರಣೆಗಳನ್ನು ಕೋರಿ ಪಕ್ಷದ ಯುವ ಕಾರ್ಯಕರ್ತರು ಸಲ್ಲಿಸಿದ ಮನವಿಯನ್ನು ಬೆಂಬಲಿಸಲು ಟ್ವಿಟರ್ ಸಹಾಯ ಪಡೆದುಕೊಂಡಿದ್ದರು. ಪಕ್ಷದ ಕಾರ್ಯಕರ್ತರ ಆನ್‌ಲೈನ್ ಪೋಸ್ಟ್ ಕುರಿತು ಬರೆದುಕೊಂಡಿದ್ದ ಶಶಿ ತರೂರ್, “ಪಕ್ಷದಲ್ಲಿ ರಚನಾತ್ಮಕ ಸುಧಾರಣೆಗಳನ್ನು ಒತ್ತಾಯಿಸಿ ಕಾಂಗ್ರೆಸ್‌ನ ಯುವ ಸದಸ್ಯರ ಗುಂಪು ಪ್ರಸಾರ ಮಾಡುತ್ತಿರುವ ಈ ಪೋಸ್ಟ್ ಅನ್ನು ನಾನು ಸ್ವಾಗತಿಸುತ್ತೇನೆ. ಇದರಲ್ಲಿ ಈವರೆಗೆ 650ಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಅದನ್ನು ಬೆಂಬಲಿಸಿ ಮುನ್ನಡೆಯಲು ನನಗೆ ಸಂತೋಷವಾಗುತ್ತದೆ" ಎಂದಿದ್ದರು.
ಅಧ್ಯಕ್ಷ ಸ್ಥಾನದ ಚುನಾವಣಾಗೆ ಸ್ಪರ್ಧಿಸಲಿದ್ದಾರೆಯೇ ತರೂರ್?
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಶಶಿ ತರೂರ್ ಕೂಡ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಕೇಳಿಬಂದಿವೆ. ಆದರೆ, ಈ ಪ್ರಶ್ನೆಗೆ ತರೂರ್ ಇದುವರೆಗೂ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಚುನಾವಣೆಗೆ ಸ್ಪರ್ಧಿಸುವ ಪತ್ರಕರ್ತರ ಪ್ರಶ್ನೆಗೆ ಅವರು ಮೌನ ವಹಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತರೂರ್ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹೇಳಿದ್ದರು.
ಪಕ್ಷವನ್ನು ಬಲಪಡಿಸಲು ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಆನ್ಲೈನ್ ಪೋಸ್ಟ್ ನಲ್ಲಿ "ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗೆ ನಾವು ಪಕ್ಷದ ಎಲ್ಲಾ ಸದಸ್ಯರನ್ನು ಬ್ಲಾಕ್ ಸಮಿತಿಯಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತೆಗೆದುಕೊಂಡು ಅವರೊಂದಿಗೆ ಸೇರಿ ಅಧಿಕಾರ ವಹಿಸುವುದಾಗಿ ಪ್ರತಿಜ್ಞೆ ತೆಗೆದುಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ" ಎಂದು ಹೇಳಲಾಗಿದೆ. ಇದಲ್ಲದೆ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ 'ಉದಯಪುರ್ ಹೊಸ ಸಂಕಲ್ಪ'ವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ್ದು, ಅದರಲ್ಲಿ ಪಕ್ಷದ ಸಂಘಟನೆಯಲ್ಲಿ ಸುಧಾರಣೆಗಾಗಿ ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲ 'ಓರ್ವ ವ್ಯಕ್ತಿ, ಒಂದು ಹುದ್ದೆ' ಹಾಗೂ 'ಒಂದು ಕುಟುಂಬ ಒಂದು ಟಿಕೆಟ್' ವ್ಯವಸ್ಥೆಗಳ ಕುರಿತು ಕೂಡ ಹೇಳಲಾಗಿದೆ.
ಇದನ್ನೂ ಓದಿ-Controversy: 'ಮದರ್ಸಾ ಹಾಗೂ ಎಎಂಯುಗಳನ್ನು ಬಾಂಬ್ ಬಳಸಿ ಬ್ಲಾಸ್ಟ್ ಮಾಡಬೇಕು' : ಸ್ವಾಮಿ ಯತಿ ನರಸಿಂಹಾನಂದ್
ಆಕ್ಷನ್ ಮೋಡ್ ನಲ್ಲಿ ಸೋನಿಯಾ ಗಾಂಧಿ
ವಿದೇಶದಿಂದ ಮರಳಿದ ನಂತರ ಸೋನಿಯಾ ಗಾಂಧಿ ಆಕ್ಷನ್ ಮೋಡ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು, ಶಶಿ ತರೂರ್ ಹೊರತುಪಡಿಸಿ, ಸಂಸದ ದೀಪೇಂದರ್ ಹೂಡಾ, ಬಾಕ್ಸರ್ ವಿಜೇಂದರ್, ಮಧ್ಯಪ್ರದೇಶದ ನೂತನ ಕಾಂಗ್ರೆಸ್ ಉಸ್ತುವಾರಿ ಜೆಪಿ ಅಗರ್ವಾಲ್ ಮತ್ತು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಅವರುಗಳು ಕೂಡ ಇಂದು ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ-Project Cheetah: ಚಿರತೆಗಳ ಪುನರ್ವಸತಿ ರಾಜಕೀಯ! 8 ಚಿರತೆಗಳ ಹೆಸರು ಹೇಳಿದ ಮಲ್ಲಿಕಾರ್ಜುನ್ ಖರ್ಗೆ
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆ.22ರಂದು ಅಧಿಸೂಚನೆ ಹೊರಬೀಳಲಿದ್ದು, ಸೆ.24ರಿಂದ 30ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.