ನವದೆಹಲಿ: ಹರಿಯಾಣ ಕಾಂಗ್ರೆಸ್ ಘಟಕದ ವಕ್ತಾರ ವಿಕಾಸ್ ಚೌಧರಿ ಅವರನ್ನು ಗುರುವಾರ ಬೆಳಿಗ್ಗೆ ಫರಿದಾಬಾದ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಗುರುವಾರ ನಡೆದಿದೆ. 


COMMERCIAL BREAK
SCROLL TO CONTINUE READING

ವಿಕಾಸ್ ಚೌಧರಿ ಅವರಿಗೆ ಪ್ರತಿನಿತ್ಯ ಜಿಮ್ ಗೆ ಹೋಗುವ ಅಭ್ಯಾಸವಿದ್ದು, ಎಂದಿನಂತೆಯೇ ಇಂದೂ ಸಹ ಜಿಮ್ ಗೆ ಹೋಗಿದ್ದಾರೆ. ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಕಾರಿನಿಂದ ಇಳಿದ ವಿಕಾಸ್ ಅವರ ಮೇಲೆ ಬಿಳಿ ಬಣ್ಣದ SX4 ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 10 ಹೆಚ್ಚು ಗುಂಡು ಹಾರಿಸಿದ್ದಾರೆ. ಪರಿಣಾಮ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ತೀವ್ರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿಕಾಸ್ ಅವರನ್ನು ಸ್ಥಳಿಯರು ಸರ್ವೋದಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ ಎನ್ನಲಾಗಿದೆ. 


"ಕುತ್ತಿಗೆ ಭಾಗದಲ್ಲಿ ಗುಂಡೇಟು ತಗುಲಿದ್ದರಿಂದ ವಿಕಾಸ್ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಕೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಆರ್ಮಭಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದೊಂದು ಪೂರ್ವಯೋಜಿತ ಹತ್ಯೆ" ಎಂದು ಎಂದು ಡಿಸಿಪಿ ಜೈವೀರ್ ರಥಿ ತಿಳಿಸಿದ್ದಾರೆ.


ವಿಕಾಸ್ ಚೌಧರಿ ಕೊಲೆಯನ್ನು ಖಂಡಿಸಿರುವ ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ಅವರು, ಮನೋಹರ್ ಲಾಲ್ ಖತ್ತಾರ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇದು ಜಂಗಲ್ ರಾಜ್... ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದಡಿ ಯಾರಿಗೂ ಕಾನೂನಿನ ಭಯವಿಲ್ಲ. ಇದೇ ರೀತಿಯ ಘಟನೆ ನಿನ್ನೆಯಷ್ಟೇ ನಡೆದಿದ್ದು, ಲೈಂಗಿಕ ಕ್ರಿಯೆಗೆ ವಿರೋಧಿಸಿದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಘಟನೆ ಬಗ್ಗೆ ಕಠಿಣ ತನಿಖೆ ಆಗಬೇಕಿದೆ" ಎಂದಿದ್ದಾರೆ.