ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.ತ್ಯಾಗಿ ಅವರ ಸಾವಿಗೆ ಮೊದಲು ಲೈವ್ ಟಿವಿ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದರು.


COMMERCIAL BREAK
SCROLL TO CONTINUE READING

'ಒಬ್ಬ ಕಾಂಗ್ರೆಸ್ಸಿಗ ಮತ್ತು ನಿಜವಾದ ದೇಶಭಕ್ತ ಶ್ರೀ ರಾಜೀವ್ ತ್ಯಾಗಿ ಅವರ ಹಠಾತ್ ನಿಧನದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಈ ದುಃಖದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಅವರ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಇರಲಿವೆ' ಎಂದು ಕಾಂಗ್ರೆಸ್ ತ್ಯಾಗಿಗೆ ಗೌರವ ಸಲ್ಲಿಸಿತು.


ತ್ಯಾಗಿ ಅವರ ನಿಧನಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶಶಿ ತರೂರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.



ಕಾಂಗ್ರೆಸ್ ಇಂದು ತನ್ನ ಒಬ್ಬ" ಬಬ್ಬರ್ ಶೇರ್ "ಅನ್ನು ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ."ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರಾದ ಶ್ರೀ ರಾಜೀವ್ ತ್ಯಾಗಿ ಅವರ ಅಕಾಲಿಕ ಮರಣವು ನನಗೆ ವೈಯಕ್ತಿಕ ದುಃಖವಾಗಿದೆ" ಎಂದು ಪ್ರಿಯಾಂಕಾ ಹೇಳಿದರು.


ಕಾಂಗ್ರೆಸ್ಸಿನ ಸಚಿನ್ ಪೈಲಟ್ ಕೂಡ ಸಂತಾಪ ಸೂಚಿಸಿ, "ಶ್ರೀ ರಾಜೀವ್ ತ್ಯಾಗಿ ಜಿ ಅವರ ನಿಧನದ ಬಗ್ಗೆ ತಿಳಿದುಕೊಂಡಾಗ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ. " ಎಂದು ಹೇಳಿದರು.ವರದಿಗಳ ಪ್ರಕಾರ, ತ್ಯಾಗಿ ಗಾಜಿಯಾಬಾದ್‌ನಲ್ಲಿ ನಿಧನರಾದರು.