ತಿರುವನಂತಪುರಂ: ಇತ್ತಿಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ ಬಗ್ಗೆ ಹಾಡಿ ಹೊಗಳಿದ್ದ ಕೇರಳದ ಮಾಜಿ ಸಂಸದ ಅಬ್ದುಲ್ಲಾಕುಟ್ಟಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಪ್ರಕಟಣೆ ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಎನ್ ಡಿಎ ವಿಜಯೋತ್ಸವಕ್ಕೆ ಮೋದಿಯ ಅಭಿವೃದ್ಧಿಯ ಅಜೆಂಡಾ ಕಾರಣ ಎಂದಿದ್ದ ಕುಟ್ಟಿ,  ಪ್ರಧಾನಿ ಮೋದಿ, ಗಾಂಧಿಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಬಳಿಕ ಕಾಂಗ್ರೆಸ್ ಸ್ಪಷ್ಟನೆ ಕೇಳಿ ಅಬ್ದುಲ್ಲಾ ಕುಟ್ಟಿಗೆ ನೋಟಿಸ್ ಜಾರಿ, ಹೇಳಿಕೆಗೆ ವಿವರಣೆ ನೀಡುವಂತೆ ಹೇಳಿತ್ತು. ಆದರೆ, ಅಬ್ದುಲ್ಲ ಕುಟ್ಟಿ ಸ್ಪಷ್ಟನೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕುಟ್ಟಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.


ಈ ಹಿಂದೆ ನರೇಂದ್ರ ಮೋದಿ ಅವರ ಗುಜರಾತ್ ಮಾದರಿ ಅಭಿವೃದ್ಧಿಯನ್ನು ಪ್ರಶಂಸಿಸಿದ್ದಕ್ಕಾಗಿ 2009ರಲ್ಲಿ ಸಿಪಿಎಂನಿಂದ ಹೊರಹಾಕಲಾಗಿತ್ತು.