Congres President Election 2022: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪಕ್ಷ ಸಜ್ಜಾಗಿದೆ. ಪಕ್ಷಾಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಖರ್ಗೆ ಅವರೊಂದಿಗೆ ದೀಪೇಂದ್ರ ಹೂಡಾ, ಗೌರವ್ ಬಲ್ಲಭ್ ಮತ್ತು ನಾಸಿರ್ ಹುಸೇನ್ ಉಪಸ್ಥಿತರಿದ್ದರು. ಈ ವೇಳೆ ಕಾಂಗ್ರೆಸ್‌ನ ಮೂವರು ಹಿರಿಯ ವಕ್ತಾರರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂವರು ವಕ್ತಾರರು ಅಧ್ಯಕ್ಷ ಹುದ್ದೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸುವುದು ಕಂಡು ಬರಲಿದೆ.


COMMERCIAL BREAK
SCROLL TO CONTINUE READING

ರಾಜೀನಾಮೆ ನೀಡಿದ ವಕ್ತಾರರಲ್ಲಿ ಗೌರವ್ ಬಲ್ಲಭ್, ದೀಪೇಂದರ್ ಹೂಡಾ ಮತ್ತು ನಾಸಿರ್ ಹುಸೇನ್ ಶಾಮೀಲಾಗಿದ್ದಾರೆ. ಈ ಕುರ್ದಿತು ಮಾತನಾಡಿರುವ ಪಕ್ಷದ ವಕ್ತಾರ ಗೌರವ್ ಬಲ್ಲಭ್, ‘ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಮೇರೆಗೆ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಖರ್ಗೆ ಅವರ ಪ್ರಚಾರಕ್ಕೆ ಮತ್ತಷ್ಟು ಶ್ರಮಿಸುತ್ತೇವೆ’ ಎಂದಿದ್ದಾರೆ. ಇದರಿಂದ ಇದೀಗ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದೆ ಎಂಬುದು ನಿಚ್ಚಳವಾಗಿದೆ.


ಇದನ್ನೂ ಓದಿ-Congress President Elections: 'ಹಳೆ ಕಾಂಗ್ರೆಸ್ ಪಕ್ಷ ಬೇಕಾದರೆ ಖರ್ಗೆ ನಿಂತಿದ್ದಾರೆ, ಬದಲಾವಣೆ ಬಯಸುವುದಾದರೆ ನಾನು ನಿಂತಿದ್ದೇನೆ'


'ಎಲ್ಲಿಯೇ ಇದ್ದರು ಫುಲ್ ಟೈಮ್ ಕೆಲಸ ಮಾಡುವ ಅಭ್ಯಾಸ'
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಠಿಣ ಪರಿಶ್ರಮದ ನಂತರ ಇಲ್ಲಿಗೆ ಬಂದಿದ್ದೇನೆ. ಎಲ್ಲೇ ಹೋದರೂ ಫುಲ್ ಟೈಮ್ ಕೆಲಸ ಮಾಡುವ ಅಭ್ಯಾಸ ನನಗಿದೆ ಎಂದಿದ್ದಾರೆ. ಶಶಿ ತರೂರ್ ಅವರ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಆಲೋಚನೆಗಳನ್ನು ಹೊಂದಿರಬಹುದು ಎಂದು ಹೇಳಿದ್ದಾರೆ. ಅದನ್ನು 9,300 ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಇದು ಮನೆಯ ವಿಷಯ. ನಾನೊಬ್ಬನೇ ನಿರ್ಧರಿಸಲು ಸಾಧ್ಯವಿಲ್ಲ, ಸಮಿತಿಯಲ್ಲಿರುವ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ-ರಾಜಸ್ತಾನದ ಸಿಎಂ ಆಗಿ ಮುಂದುವರೆಯುವ ಸುಳಿವು ನೀಡಿದ ಅಶೋಕ್ ಗೆಹಲೋಟ್


ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ
ಈ ದೇಶಕ್ಕಾಗಿ ಗಾಂಧಿ ಕುಟುಂಬ ತ್ಯಾಗ ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಈ ಸಂದರ್ಭದಲ್ಲಿ ಹೇಳಿದ್ದಾರೆ. ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದಲ್ಲಿದ್ದ ಸೋನಿಯಾ ಗಾಂಧಿ ಪ್ರಧಾನಿಯಾಗಲು ಪ್ರಯತ್ನಿಸಲಿಲ್ಲ, ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಪ್ರಯತ್ನಿಸಲಿಲ್ಲ. ಇಂದೂ ಕೂಡ ರಾಹುಲ್ ಗಾಂಧಿ ಬಿಸಿಲಲ್ಲಿ 'ಭಾರತ್ ಜೋಡೋ ಯಾತ್ರೆ' ಮಾಡುತ್ತಿದ್ದಾರೆ. ನಾನು ಖಂಡಿತವಾಗಿಯೂ ಅವರೊಂದಿಗೆ ಮತ್ತು ಇತರ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.