ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೊಸ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ರಚಿಸಿದ್ದು, ಈ ಸಮಿತಿಯು ಪಕ್ಷದ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೊಸ ಸಮಿತಿಯಲ್ಲಿ ಶಶಿ ತರೂರ್, ಸಚಿನ್ ಪೈಲಟ್, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 39 ನಾಯಕರಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾವೇರಿ ಸೇರಿದಂತೆ ಜಲ ವಿವಾದ, ಅಣೆಕಟ್ಟೆಗಳ ನೀರು ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ..!


ಫೆಬ್ರವರಿ 24 ರಿಂದ ಫೆಬ್ರವರಿ 26 ರವರೆಗೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ  85 ನೇ ಸರ್ವಸದಸ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2024 ರ ಲೋಕಸಭಾ ಚುನಾವಣೆಗಳು ಮತ್ತು ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದ  ಐದು ರಾಜ್ಯಗಳಲ್ಲಿ ವರ್ಷಾಂತ್ಯದ ಚುನಾವಣೆಗೆ ಮುಂಚಿತವಾಗಿ ಪುನರ್ರಚನೆ ನಿರ್ಧಾರ ಬಂದಿದೆ.


ಹೊಸ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಂಪೂರ್ಣ ಪಟ್ಟಿ ಇಲ್ಲಿದೆ:


1 ಮಲ್ಲಿಕಾರ್ಜುನ ಖರ್ಗೆ
2 ಸೋನಿಯಾ ಗಾಂಧಿ
3 ಮನಮೋಹನ್ ಸಿಂಗ್
4 ರಾಹುಲ್ ಗಾಂಧಿ
5 ಅಧೀರ್ ರಂಜನ್ ಚೌಧರಿ
6 ಎ ಕೆ ಆಂಟನಿ
7 ಅಂಬಿಕಾ ಸೋನಿ
8 ಮೀರಾ ಕುಮಾರ್
9 ದಿಗ್ವಿಜಯ್ ಸಿಂಗ್
10 ಪಿ ಚಿದಂಬರಂ
11 ತಾರಿಕ್ ಅನ್ವರ್
12 ಲಾಲ್ ಥನ್ಹಾವಾಲಾ
13 ಮುಕುಲ್ ವಾಸ್ನಿಕ್
14 ಆನಂದ್ ಶರ್ಮಾ
15 ಅಶೋಕರಾವ್ ಚವಾಣ್
16 ಅಜಯ್ ಮಾಕೆನ್
17 ಚರಂಜಿತ್ ಸಿಂಗ್ ಚನ್ನಿ
18 ಪ್ರಿಯಾಂಕಾ ಗಾಂಧಿ ವಾದ್ರಾ
19 ಕುಮಾರಿ ಸೆಲ್ಜಾ
20 ಗೈಖಂಗಂ
21 ಎನ್ ರಘುವೀರ ರೆಡ್ಡಿ
22 ಶಶಿ ತರೂರ್
23 ತಾಮ್ರಧ್ವಜ ಸಾಹು
24 ಅಭಿಷೇಕ್ ಮನು ಸಿಂಘ್ವಿ
25 ಸಲ್ಮಾನ್ ಖುರ್ಷಿದ್
26 ಜೈರಾಮ್ ರಮೇಶ್
27 ಜಿತೇಂದ್ರ ಸಿಂಗ್
28 ರಣದೀಪ್ ಸಿಂಗ್ ಸುರ್ಜೆವಾಲಾ
29 ಸಚಿನ್ ಪೈಲಟ್
30 ದೀಪಕ್ ಬಬಾರಿಯಾ
31 ಜಗದೀಶ್ ಠಾಕೂರ್
32 ಜಿ ಎ ಮಿರ್
33 ಅವಿನಾಶ್ ಪಾಂಡೆ
34 ದೀಪಾ ದಾಸ್ ಮುನ್ಷಿ
35 ಮಹೇಂದ್ರಜೀತ್ ಸಿಂಗ್ ಮಾಳವಿಯಾ
36 ಗೌರವ್ ಗೊಗೊಯ್
37 ಸೈಯದ್ ನಸೀರ್ ಹುಸೇನ್
38 ಕಮಲೇಶ್ವರ್ ಪಟೇಲ್
39 ಕೆ ಸಿ ವೇಣುಗೋಪಾಲ್


ಕಳೆದ ವರ್ಷ ಅಕ್ಟೋಬರ್ 10 ರಂದು ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಿಂಗಳುಗಳ ನಂತರ ಸಿಡಬ್ಲ್ಯೂಸಿ ರಚಿಸಲಾಯಿತು. ಇದು ಸ್ಟಾಪ್-ಗ್ಯಾಪ್ ವ್ಯವಸ್ಥೆಯಾಗಿ ರೂಪುಗೊಂಡ ಸ್ಟೀರಿಂಗ್ ಸಮಿತಿಯನ್ನು ಬದಲಾಯಿಸಿತು.ಸಮಿತಿಯಲ್ಲಿ ಒಟ್ಟು 39 ಸದಸ್ಯರಿದ್ದರೆ, ಸಿಡಬ್ಲ್ಯುಸಿ ರಾಜ್ಯದ ಕೆಲವು ಉಸ್ತುವಾರಿಗಳು ಮತ್ತು 13 ವಿಶೇಷ ಆಹ್ವಾನಿತರು ಸೇರಿದಂತೆ 32 ಖಾಯಂ ಆಹ್ವಾನಿತರನ್ನು ಹೊಂದಿದೆ.


ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ರೈತರ ಮೌನ ಪ್ರತಿಭಟನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.