ನವದೆಹಲಿ: ಸತತ ನಾಲ್ಕನೇ ಬಾರಿಗೆ ಲೋಕಪಾಲ್ ಆಯ್ಕೆ ಸಮಿತಿಯ ಸಭೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, "ಅತಿದೊಡ್ಡ ಏಕೈಕ ವಿರೋಧ ಪಕ್ಷದ ನಾಯಕನಿಗೆ ಸಮಿತಿಯಲ್ಲಿ ಪೂರ್ಣ ಪ್ರಮಾಣದ ಸ್ಥಾನಮಾನ ನೀಡುವವರೆಗೆ ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ಹಾಜರಾಗುವುದಿಲ್ಲ" ಎಂದು ಹೇಳಿದ್ದಾರೆ. 


ಸಭೆ ಹಾಜರಾಗದಿರುವ ಕುರಿತು ಹೇಳಿಕೆ ನೀಡಿರುವ ಖರ್ಗೆ, ನನ್ನನ್ನು ವಿಶೇಷ ಆಹ್ವಾನಿತನಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ, ಮತ ದಾಖಲಿಸುವ ಮತ್ತು ಭಾಗವಹಿಸುವ ಹಕ್ಕನ್ನು ತಾವು ಹೊಂದಿರುವುದಿಲ್ಲ. ಹಾಗಾಗಿ ಸಭೆ ಹಾಜರಾಗದಿರಲು ನಿರ್ಧರಿಸಿದ್ದೇನೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ಧ್ವನಿಯನ್ನು ಬಹಿಷ್ಕರಿಸುವುದು, ಸಂಸತ್ ಅನ್ನು ಬಹಿಷ್ಕರಿಸಿ ವಶಪಡಿಸಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.