ನವದೆಹಲಿ: ಕಾಂಗ್ರೆಸ್ ಪಕ್ಷವು ಸಂಘಪರಿವಾರದ ಹಾದಿಯನ್ನು ಹಿಡಿಯಬಾರದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಖಾಸಗಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿರುವ ಪಿಣರಾಯಿ ವಿಜಯನ್ " ಜ್ಯಾತ್ಯಾತೀತ ಎಂದು ಕರೆಯಿಸಿಕೊಳ್ಳುವ ಕಾಂಗ್ರೆಸ್ ಪಕ್ಷವು ಸಂಘ ಪರಿವಾರದ ಕ್ರಮಗಳನ್ನೇ ಕಾರ್ಯರೂಪಕ್ಕೆ ತರುತ್ತಿರುವುದು ನಿಜಕ್ಕೂ ಸ್ವೀಕಾರ್ಹವಲ್ಲ ಎಂದು ಅವರು ಕಿಡಿಕಾರಿದರು.


ಇನ್ನು ಮುಂದುವರೆದು "ಬಿಜೆಪಿ ಗೋವು ವಿಚಾರವನ್ನು ತೆಗೆದುಕೊಂಡಾಗ  ಕಾಂಗ್ರೆಸ್ ನಾಯಕರು ಗೋ ಹತ್ಯೆಯನ್ನು ತಾನು ಈ ಹಿಂದೆಯೇ ನಿಷೇಧ ಮಾಡಿದೆ ಎಂದು ಹೇಳುತ್ತಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಪ್ರತಿಯೊಂದು ವಿಚಾರದಲ್ಲಿ  ಆರೆರೆಸ್ಸ್ ಅಥವಾ ಸಂಘಪರಿವಾರದ ಹಾದಿಯನ್ನು ಹಿಡಿದಿದ್ದಾದರೆ ಅದೇಗೆ ಜ್ಯಾತ್ಯಾತೀತ ಸಿದ್ದಾಂತವನ್ನು ಬಲಪಡಿಸುತ್ತದೆ? ನೀವು ಶಬರಿಮಲೆ ವಿಚಾರದಲ್ಲಿ ಇದನ್ನು ನೋಡಬಹುದು,ಕಾಂಗ್ರೆಸ್ ಪಕ್ಷವು ಆರೆಸೆಸ್ಸ್ ಮತ್ತು ಬಿಜೆಪಿ ಹಾದಿಯನ್ನು ಹಿಡಿಯಿತು.ಜ್ಯಾತ್ಯಾತೀತತೆ ಬೇಕೆಂದರೆ ನೀವು ಕೋಮುಮಾರ್ಗವನ್ನು ಅಳವಡಿಸಿಕೊಳ್ಳಬಾರದು ಎಂದು ಅವರು ತಿಳಿಸಿದರು.