ತೆಲಂಗಾಣದಲ್ಲಿ ಮೈತ್ರಿಗೆ ಮುಂದಾದ ಕಾಂಗ್ರೆಸ್, ಟಿಡಿಪಿ, ಎಡಪಕ್ಷಗಳು; ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ
ಇತ್ತೀಚಿಗಷ್ಟೇ ತೆಲಂಗಾಣ ವಿಧಾನಸಭೆಯನ್ನು ಕೆಸಿಆರ್ ವಿಸರ್ಜಿಸಿದ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್, ಟಿಡಿಪಿ ಮತ್ತು ಎಡಪಕ್ಷಗಳು ಸೇರಿ ಚುನಾವಣೆ ನಡೆಯುವವರೆಗೆ ರಾಷ್ಟ್ರಪತಿ ಆಡಳಿತವನ್ನು ಜಾರಿಗೋಳಿಸಬೇಕೆಂದು ಆಗ್ರಹಿಸಿವೆ.
ಹೈದರಾಬಾದ್: ಇತ್ತೀಚಿಗಷ್ಟೇ ತೆಲಂಗಾಣ ವಿಧಾನಸಭೆಯನ್ನು ಕೆಸಿಆರ್ ವಿಸರ್ಜಿಸಿದ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್, ಟಿಡಿಪಿ ಮತ್ತು ಎಡಪಕ್ಷಗಳು ಸೇರಿ ಚುನಾವಣೆ ನಡೆಯುವವರೆಗೆ ರಾಷ್ಟ್ರಪತಿ ಆಡಳಿತವನ್ನು ಜಾರಿಗೋಳಿಸಬೇಕೆಂದು ಆಗ್ರಹಿಸಿವೆ.
ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಮೈತ್ರಿಕೂಟಕ್ಕೆ ಈ ಎಲ್ಲ ಪಕ್ಷಗಳು ಮುಂದಾಗಿವೆ.ಒಂದೆಡೆ ತೆಲಂಗಾಣದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು ಏಕಕಾಲಕ್ಕೆ ನಡೆಯುವುದರಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಭಾವಿಸಿ ಕೆಸಿಆರ್ ಈಗ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಇಂದು ಮೂರು ಪಕ್ಷಗಳ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸಿದರು.ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮೂರು ಪಕ್ಷದ ನಾಯಕರು" ಒಂದು ವೇಳೆ ಕೆಸಿಆರ್ ಮುಖ್ಯಮಂತ್ರಿಯಾಗಿ ಮುಂದುವರೆದದ್ದೇ ಆದಲ್ಲಿ ಮುಕ್ತ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.