ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರದಂದು ಗೋವಾದಿಂದ ವರ್ಚುವಲ್ ರ್ಯಾಲಿ ನಡೆಸುತ್ತಿರುವಾಗ, ಹೊಸ 'ನ್ಯಾಯ್ ಯೋಜನೆ'ಯನ್ನು ಘೋಷಿಸಿದ್ದಾರೆ, ಇದರ ಅಡಿಯಲ್ಲಿ ತಿಂಗಳಿಗೆ 6,000 ರೂ.ಗಳನ್ನು ಗೋವಾದ ಬಡ ನಾಗರಿಕರಿಗೆ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.


COMMERCIAL BREAK
SCROLL TO CONTINUE READING

"ನಾವು ಗೋವಾದಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ, ಹೊಸ 'ನ್ಯಾಯ ಯೋಜನೆ'ಯನ್ನು ಪ್ರಾರಂಭಿಸಲಾಗುವುದು. ತಿಂಗಳಿಗೆ 6,000 ರೂ , ಅಂದರೆ ಒಂದು ವರ್ಷದಲ್ಲಿ 72,000 ರೂ, ಗೋವಾದ ಬಡ ನಾಗರಿಕರಿಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ," ಎಂದು ರಾಹುಲ್ ಗಾಂಧಿ ಹೇಳಿದರು.


ಇದನ್ನೂ ಓದಿ-ಕೇಂದ್ರ ನೌಕರರಿಗೆ ಕಾದಿದೆ ಅದೃಷ್ಟ : DA ಹೆಚ್ಚಳದ ಜೊತೆ ಸಿಗಲಿದೆ ₹2,32,152 - ಲೆಕ್ಕಾಚಾರ ನೋಡಿ


ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, "ಬಿಜೆಪಿ ಸರ್ಕಾರ ಪ್ರವಾಸೋದ್ಯಮ, ಕೋವಿಡ್ 19 ಮತ್ತು ಉದ್ಯೋಗದಲ್ಲಿ ಹೇಗೆ ವಿಫಲವಾಗಿದೆ ಎಂಬುದನ್ನು ನೀವು ನೋಡಿದ್ದೀರಿ.ನಾವು ಪಕ್ಷಾಂತರಿಗಳಿಗೆ ಟಿಕೆಟ್ ನೀಡುತ್ತಿಲ್ಲ, ಈ ಬಾರಿ ಹೊಸ ಜನರಿಗೆ ಟಿಕೆಟ್ ನೀಡಿದ್ದೇವೆ" ಎಂದು ಹೇಳಿದರು.


ಇತರ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, "ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಗೋವಾದಲ್ಲಿ ಸರ್ಕಾರ ರಚಿಸುತ್ತದೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಹೋರಾಟ, ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ" ಎಂದು ಹೇಳಿದರು.


ಇದನ್ನೂ ಓದಿ- Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.