ಗುಜರಾತಿನಲ್ಲಿ ಕಾಂಗ್ರೆಸ್ಸಿಗಿಲ್ಲ ಪ್ರತಿಪಕ್ಷ ನಾಯಕನ ಸ್ಥಾನ..!
ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈಗ ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ.ಆ ಮೂಲಕ ಇದುವರೆಗೆ ಗುಜರಾತಿನಲ್ಲಿ ಪಕ್ಷವೊಂದು ಗಳಿಸಿದ ಅತ್ಯಧಿಕ ಸ್ಥಾನವಾಗಿದೆ.ಏತನ್ಮಧ್ಯೆ, ಈ ಫಲಿತಾಂಶ ವಿರೋಧ ಪಕ್ಷಗಳಿಗೆ ನಿಜಕ್ಕೂ ಭಾರಿ ಹೊಡೆತವನ್ನು ನೀಡಿದೆ.
ಅಹಮದಾಬಾದ್ : ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈಗ ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ.ಆ ಮೂಲಕ ಇದುವರೆಗೆ ಗುಜರಾತಿನಲ್ಲಿ ಪಕ್ಷವೊಂದು ಗಳಿಸಿದ ಅತ್ಯಧಿಕ ಸ್ಥಾನವಾಗಿದೆ.ಏತನ್ಮಧ್ಯೆ, ಈ ಫಲಿತಾಂಶ ವಿರೋಧ ಪಕ್ಷಗಳಿಗೆ ನಿಜಕ್ಕೂ ಭಾರಿ ಹೊಡೆತವನ್ನು ನೀಡಿದೆ.
ಈಗ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆದುಕೊಂಡಿದೆ ಮತ್ತು ಹೊಸದಾಗಿ ಪ್ರವೇಶಿಸಿದ ಎಎಪಿ ಐದು ಸ್ಥಾನಗಳನ್ನು ಗೆದ್ದಿರುವುದರಿಂದ, ಯಾವುದೇ ಪಕ್ಷಗಳು ಅಧಿಕೃತ ವಿರೋಧ ಪಕ್ಷದ ನಾಯಕನನ್ನು ನಾಮನಿರ್ದೇಶನ ಮಾಡಲು ಸಾಧ್ಯವಾಗುವುದಿಲ್ಲ.Gujarat Election Result 2022 : ರವೀಂದ್ರ ಜಡೇಜಾ ಪತ್ನಿ ಭರ್ಜರಿ ಗೆಲವು!
ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಒಂದು ಪಕ್ಷಕ್ಕೆ ವಿಧಾನಸಭೆಯಲ್ಲಿ ಒಟ್ಟು ಬಲದ ಶೇಕಡಾ 10 ರಷ್ಟು ಅಗತ್ಯವಿರುತ್ತದೆ.ಗಮನಾರ್ಹವಾಗಿ, ಇದು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಅತ್ಯಂತ ಕಳಪೆ ಪ್ರದರ್ಶನವಾಗಿದೆ.
ಕಳೆದ 2017 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವು ಬಿಜೆಪಿಗೆ ಕಠಿಣ ಹೋರಾಟವನ್ನು ನೀಡಲು ಯಶಸ್ವಿಯಾಗಿತ್ತು. ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 99 ಸ್ಥಾನಗಳೊಂದಿಗೆ ಬಹುಮತವನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.