ನವದೆಹಲಿ: ಇದೇ ಆಗಸ್ಟ್ 4 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಎಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಲೋಕಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಎರಡು ದಿನಗಳ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿದ್ದರು. 


ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಮೊದಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ - In Pics


ಈ ಸಂದರ್ಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ 'ಭಾರತದ ಧ್ವನಿ' (ವಾಯ್ಸ್ ಆಫ್ ಇಂಡಿಯಾ). ದೇಶದ ಭೂತ, ವರ್ತಮಾನ ಹಾಗೂ ಭವಿಷ್ಯದ ನಡುವಿನ ಸೇತುವೆಯಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಯ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದರು. 


ಬಿಜೆಪಿಯಿಂದ ಶೋಷಣೆಗೆ ಒಳಗಾದವರ ಪರ ಹೋರಾಡಿ: ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಕರೆ


ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) 23 ಸದಸ್ಯರನ್ನು, 19 ಶಾಶ್ವತ ಆಹ್ವಾನಿತರು ಮತ್ತು 9 ವಿಶೇಷ ಆಹ್ವಾನಿತರನ್ನು ಒಳಗೊಂಡಿದೆ. ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಓಮನ್ ಚಾಂಡಿ(ಕೇರಳ), ತರುಣ್ ಗೊಗೋಯಿ(ಅಸ್ಸಾಂ), ಸಿದ್ಧರಾಮಯ್ಯ(ಕರ್ನಾಟಕ) ಮತ್ತು ಹರೀಶ್ ರಾವತ್(ಉತ್ತರಾಖಂಡ್) ಅವರನ್ನೂ ಸಮಿತಿ ಒಳಗೊಂಡಿದೆ. 


ಮೋದಿ ಸರ್ಕಾರದ ಹಿನ್ನಡೆಗೆ ಕ್ಷಣಗಣನೆ ಆರಂಭ: ಸೋನಿಯಾ ಗಾಂಧಿ


ಸಮಿತಿಯ ಶಾಶ್ವತ ಆಹ್ವಾನಿತರಾಗಿ ಶೀಲಾ ದೀಕ್ಷಿತ್‌, ಪಿ.ಚಿದಂಬರಂ, ಜ್ಯೋತಿರಾಧಿತ್ಯ ಸಿಂಧಿಯಾ, ಬಾಳಾಸಾಹೇಬ್‌ ತೋರಟ್‌, ತಾರಿಖ್‌ ಹಮೀದ್‌ ಖಾರ್ರಾ, ಪಿ.ಸಿ. ಚಾಕೋ, ಜಿತೇಂದ್ರ ಸಿಂಗ್‌, ಆರ್‌ಪಿಎನ್‌ಸಿಂಗ್‌, ಪಿ.ಎಲ್‌. ಪುನಿಯಾ, ರಣದೀಪ್‌ ಸುರ್ಜೆವಾಲಾ, ಆಶಾ ಕುಮಾರಿ, ರಜನಿ ಪಾಟೀಲ್‌, ರಾಮಚಂದ್ರ ಕುಂಟಿಯಾ, ಅನುಗ್ರಹ ನಾರಾಯಣ ಸಿಂಗ್‌, ರಾಜೀವ್‌ ವಿ. ಸಾತವ್‌, ಶಕ್ತಿಸಿನ್ಹಾ ಗೋಹಿಲ್‌, ಗೌರವ್‌ ಗಗೋಯಿ, ಡಾ.ಎ.ಚೆಲ್ಲ ಕುಮಾರ್‌ ಸಮಿತಿಯಲ್ಲಿದ್ದಾರೆ. 


ವಿಶೇಷ ಆಹ್ವಾನಿತರಾಗಿ ವಿಶೇಷ ಆಹ್ವಾನಿತರಾಗಿ ಕೆ.ಎಚ್‌.ಮುನಿಯಪ್ಪ, ಅರುಣ್‌ ಯಾದವ್‌, ದಿಪೇಂದರ್‌ ಹೂಡಾ, ಜಿತಿನ್‌ ಪ್ರಸಾದ್‌, ಕುಲದೀಪ್‌ ವಿಷ್ಣೋಯಿ ಹಾಗೂ ಐಎನ್‌ಟಿಯುಸಿ, ಸೇವಾ ದಳ, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಎನ್‌ಎಸ್‌ಯುಐ ಘಟಕಗಳ ಮುಖ್ಯಸ್ಥರಿಗೆ ಸ್ಥಾನ ನೀಡಲಾಗಿದೆ.