ನವದೆಹಲಿ: ಅಯೋಧ್ಯೆಯಲ್ಲಿ ಡಿಸೆಂಬರ್ 6 ರಿಂದ ರಾಮ್ ಮಂದಿರ್ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಉತ್ತರ ಪ್ರದೇಶದ ಉನ್ನಾವೊ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮಂಗಳವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'ರಾಮ್ ದೇವಾಲಯದ ವಿಷಯದಲ್ಲಿ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ ಮತ್ತು ನಾವು ಡಿಸೆಂಬರ್ 6 ರಂದು ರಾಮ್ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸುತ್ತೇವೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.


ಇದೇ ಅವರು ಹಿಂದುತ್ಬ ಎಂದಿಗೂ ಕೂಡ ಮಸೀದಿ ಅಥವಾ ಚರ್ಚುಗಳನ್ನು ಕೆಡವಲು ಎಂದಿಗೂ ಪ್ರಯತ್ನಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು ' ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಯಾರ ಮಧ್ಯಸ್ಥಿಕೆ ಸ್ವೀಕಾರಾರ್ಹವಲ್ಲ. ಇಮ್ರಾನ್ ಖಾನ್ ಬಯಸಿದರೆ, ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತು ಸಂವಾದ ನಡೆಸಬಹುದು. ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು.


ಇದೇ ವೇಳೆ ಕಾಶ್ಮೀರದಲ್ಲಿ ನೆಲಸಮಗೊಂಡಿರುವ 50 ಸಾವಿರ ದೇವಸ್ತಾನಗಳನ್ನು ಮತ್ತೆ ಸರ್ಕಾರ ನಿರ್ಮಿಸುತ್ತದೆ ಸಾಕ್ಷಿ ಮಹಾರಾಜ್  ಎಂದು ಹೇಳಿದರು. ಯೋಗ ಗುರು ಬಾಬಾ ರಾಮದೇವ್ ಮುಸ್ಲಿಂ ಸಮುದಾಯವು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲವಾಗಿ ಮುಂದೆ ಬರಬೇಕೆಂದು ಆಗ್ರಹಿಸಿದರು.


ಸೆಪ್ಟೆಂಬರ್ 18 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ರಾಮ್ನ್ ಜನಮಭೂಮಿ-ಬಾಬರಿ ಮಸೀದಿ ಪ್ರಕರಣದ ಸಲ್ಲಿಕೆಗಳನ್ನು ಅಕ್ಟೋಬರ್ 18 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಐದು ನ್ಯಾಯಾಧೀಶರ ಸಂವಿಧಾನ ಪೀಠವು ವಿಚಾರಣೆಯೊಂದಿಗೆ ಏಕಕಾಲದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ನಡೆಸಬಹುದು ಎಂದು ಹೇಳಿದರು.