ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ ಚಿತ್ರ 'ಛಪಾಕ್' ಬಿಡುಗಡೆಯಾದಾಗಿನಿಂದಲೂ ವಿವಾದಗಳಲ್ಲಿ ಸಿಲುಕಿಹಾಕಿಕೊಳ್ಳುತ್ತಲೇ ಇದೆ. ಇದೀಗ ಚಿತ್ರಕ್ಕೆ ಮತ್ತೊಂದು ಕಂಟಕ ಎದುರಾಗಿದ್ದು, ಚಿತ್ರ ನಿರ್ಮಾಪಕರ ವಿರುದ್ಧ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ದಾಖಲಿಸಲಾಗಿದೆ. ಚಿತ್ರ ನಿರ್ಮಾಪಕರು ಹಾಗೂ ನಟಿ ದೀಪಿಕಾ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಈ ಅರ್ಜಿ ದಾಖಲಿಸಿರುವ ವಕೀಲೆ ಅಪರ್ಣಾ ಭಟ್, ನ್ಯಾಯಾಲಯದ ಆದೇಶದ ಹೊರತಾಗಿಯೂ ಕೂಡ ತಮಗೆ ಉಚಿತ ಶ್ರೇಣಿ ಒದಗಿಸದ ಕಾರಣ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರ ನಿರ್ಮಾಣದ ವೇಳೆ ಚಿತ್ರದಲ್ಲಿನ ವಕೀಲೆ ಅಪರ್ಣಾ ಭಟ್ ಅವರ ಕೊಡುಗೆಗೆ ಉಚಿತ ಶೇಣಿ ಒದಗಿಸಲು ನಾಯಾಲಯ ಆದೇಶ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶ ಪಾಲಿಸದೆ ಇದ್ದ ಕಾರಣ ನಿರ್ಮಾಪಕರು ಹಾಗೂ ದೀಪಿಕಾ ವಿರುದ್ಧ ಮಾನನಷ್ಟ ಖಟ್ಲೆ ನಡೆಸಲು ಅರ್ಜಿಯಲ್ಲಿ ಕೋರಲಾಗಿದೆ.


ಆಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರವಾಲ್ ಜೀವನ ಆಧರಿಸಿ ಈ ಚಿತ್ರ ನಿರ್ಮಾಣಗೊಂಡಿದ್ದು, ನ್ಯಾಯಾಲಯದ ಹೋರಾಟದಲ್ಲಿ ಲಕ್ಷ್ಮಿ ಅಗರವಾಲ್ ಪರ ಅಪರ್ಣಾ ಭಟ್ ಪ್ರತಿನಿಧಿಸಿದ್ದರು.


ಈ ಕುರಿತು ಸುದ್ದಿ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿರುವ ಅಪರ್ಣಾ ಭಟ್, "ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರದ ಪ್ರತಿಯಲ್ಲಿ ತಮ್ಮ ಕೊಡುಗೆಯ ಕುರಿತು ಚಿತ್ರ ನಿರ್ಮಾಪಕರು ಉಲ್ಲೇಖಿಸಿಲ್ಲ ಎಂಬುದನ್ನು ತಾವು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿ, ಈ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ" ಹೇಳಿಕೊಂಡಿದ್ದಾರೆ. ಆದರೆ, ಇದೆ ವೇಳೆ ಭಾರತದಲ್ಲಿ ಬಿತ್ತರಗೊಳ್ಳುತ್ತಿರುವ ಚಿತ್ರದ ಪ್ರತಿಯಲ್ಲಿ ತಮಗೆ ಉಚಿತ ಶ್ರೇಣಿ ನೀಡಿರುವುದಾಗಿ" ಅಪರ್ಣಾ ಹೇಳಿಕೊಂಡಿದ್ದಾರೆ.