ಕಾಶ್ಮೀರದಲ್ಲಿ ಉಗ್ರರಿಂದ ಗ್ರಾನೈಡ್ ದಾಳಿ; ಓರ್ವ ಪೊಲೀಸ್ ಸಾವು
ಭಾನುವಾರ ಮುಂಜಾನೆ ಉಗ್ರರ ಗುಂಪೊಂದು ಪೊಲೀಸ್ ಸ್ಟೇಶನ್ ಮೇಲೆ ಏಕಾಏಕಿ ಗ್ರಾನೈಡ್ ದಾಳಿ ನಡೆಸಿದೆ.
ಶ್ರೀನಗರ: ಜಮ್ಮು-ಕಾಶ್ಮೀರ ಗಡಿ ಭಾಗದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಭಾನುವಾರ ಮುಂಜಾನೆ ನಡೆಸಿದ ಗ್ರಾನೈಡ್ ದಾಳಿಯಲ್ಲಿ ಓರ್ವ ಪೋಲಿಸ್ ಪೇದೆ ಬಲಿಯಾಗಿದ್ದಾನೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ ಉಗ್ರರ ಗುಂಪೊಂದು ಪೊಲೀಸ್ ಸ್ಟೇಶನ್ ಮೇಲೆ ಏಕಾಏಕಿ ಗ್ರಾನೈಡ್ ದಾಳಿ ನಡೆಸಿದೆ. ಕೂಡಲೇ ಪೊಲೀಸರೂ ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದಾಗಿ ವರದಿಯಾಗಿದೆ.