ನವದೆಹಲಿ : ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII), ದೇಶದಲ್ಲಿ ಸಾಕಷ್ಟು ಲಸಿಕೆ ದಾಸ್ತಾನು ಇದೆ ಎಂದು ಉಲ್ಲೇಖಿಸಿ, ಬೂಸ್ಟರ್ ಡೋಸ್‌ಗಾಗಿ (Booster dose) ಕೋವಿಶೀಲ್ಡ್‌ಗೆ  (Covishield) ಅನುಮೋದನೆ ನೀಡುವಂತೆ,  ಡ್ರಗ್ ರೆಗ್ಯುಲೇಟರ್ ಆಫ್ ಇಂಡಿಯಾವನ್ನು ಕೇಳಿದೆ. ಮೂಲಗಳ ಪ್ರಕಾರ, ಕರೋನಾ ವೈರಸ್‌ನ ಹೊಸ ರೂಪಾಂತರವನ್ನು ಎದುರಿಸಲು ಬೂಸ್ಟರ್ ಶಾಟ್‌ನ ಅಗತ್ಯವಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಹೇಳಿದೆ.


COMMERCIAL BREAK
SCROLL TO CONTINUE READING

ಭಾರತದ ಡಿಸಿಜಿಐಗೆ ಕಳುಹಿಸಿದ ಅರ್ಜಿಯಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರ್ ಈಗಾಗಲೇ ಬೂಸ್ಟರ್ ಡೋಸ್ ಅನ್ನು ಅನುಮೋದಿಸಿದೆ ಎಂದು ಹೇಳಿದೆ. AstraZeneca ChAdOx1 nCoV-19 ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಹೇಳಿದೆ.  ಕೋವಿಶೀಲ್ಡ್  (Covishield) ಎರಡೂ ಡೋಸ್ ಗಳನ್ನು ಈಗಾಗಲೇ ಪಡೆದಿರುವ ನಾಗರಿಕರು ನಿರಂತರವಾಗಿ ಬೂಸ್ಟರ್ ಡೋಸ್ ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಅದು ಹೇಳಿದೆ.  


ಇದನ್ನೂ ಓದಿ : Omicron threat: ಅಪಾಯದಲ್ಲಿರುವ ದೇಶಗಳಿಂದ ಪ್ರಯಾಣಿಸುವ 6 ಪ್ರಯಾಣಿಕರಿಗೆ ಭಾರತದಲ್ಲಿ COVID-19 ಪಾಸಿಟಿವ್


ಬೂಸ್ಟರ್ ಡೋಸ್ ಗೆ ಬೇಡಿಕೆ ಇಟ್ಟಿರುವ ದೇಶಗಳು : 
ಈ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್‌ನಿಂದ ವಂಚಿತರಾಗಬಾರದು ಎಂಬುದು ಈ ಸಮಯದ ಅಗತ್ಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆರಿಗ್ಯದ ಹಕ್ಕಾಗಿದೆ ಎಂದು DCGI ಹೇಳಿದೆ. ಬೂಸ್ಟರ್ ಡೋಸ್‌ಗಳ ಅಗತ್ಯತೆಯ ವೈಜ್ಞಾನಿಕ ಪುರಾವೆಗಳನ್ನು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಪರಿಗಣಿಸುತ್ತಿದೆ ಎಂದು ಕೇಂದ್ರ ಸರ್ಕಾರ ಈ ಮೊದಲು ಸಂಸತ್ತಿನಲ್ಲಿ ತಿಳಿಸಿದೆ. ಇತ್ತೀಚೆಗೆ, ಕೇರಳ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢವು SARS-CoV-2 ನ ಹೊಸ ರೂಪಾಂತರದ 'ಓಮಿಕ್ರಾನ್' ನ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಬೂಸ್ಟರ್ ಡೋಸ್‌ಗಳನ್ನು (Booster dose) ಅನುಮತಿಸುವ ಬಗ್ಗೆ ನಿರ್ಧರಿಸಲು ಕೇಂದ್ರವನ್ನು ಒತ್ತಾಯಿಸಿವೆ.


ಈ ವಿಷಯವನ್ನು ನ್ಯಾಯಾಲಯವೂ ಹೇಳಿದೆ :
ಮತ್ತೊಂದೆಡೆ, ದೆಹಲಿ ಹೈಕೋರ್ಟ್ (Delhi high court)  ನವೆಂಬರ್ 25 ರಂದು ಆ ಜನರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಎರಡನೇ ಅಲೆಯ ತರಹದ ಪರಿಸ್ಥಿತಿ ಬರಬಾರದು ಹಾಗಾಗಿ ಎರಡೂ ಡೋಸ್ ಕರೋನಾ ವೈರಸ್ (coronavirus) ಲಸಿಕೆ ಪಡೆದವರಿಗೆ ಮೂರನೇ ಡೋಸ್ ನೀಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೋರ್ಟ್ ಹೇಳಿತ್ತು.


ಇದನ್ನೂ ಓದಿ : ಭಾರತೀಯ ಹಿಂದೂ ಯಾತ್ರಿಕರಿಗೆ ವೀಸಾ ನೀಡಿದ ಪಾಕಿಸ್ತಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.