Coronavirus ನ ಅಪಾಯಕಾರಿ ರೂಪಾಂತರಿಯ ಅಪಾಯ ಹೆಚ್ಚಾಗುತ್ತಿದೆ, ತಜ್ಞರ ಎಚ್ಚರಿಕೆ
Corona New Variant Alert - ಇಡೀ ವಿಶ್ವದಲ್ಲಿ ಕೊರೊನಾ ಆತಂಕ ಮತ್ತೊಮ್ಮೆ ಹೆಚ್ಚಾಗತೊಡಗಿದೆ. ಏತನ್ಮಧ್ಯೆ, ಕರೋನದ ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯಾದರು ಏನು ತಿಳಿದುಕೊಳ್ಳೋಣ ಬನ್ನಿ.
Corona New Variant: ವಿಶ್ವಾದ್ಯಂತೆ ಕೊರೊನಾ ವೈರಸ್‌ನ (Coronavirus) ಭೀತಿ ಮತ್ತೊಮ್ಮೆ ಹೆಚ್ಚಾಗುತ್ತಿದೆ. ಅನೇಕ ದೇಶಗಳಲ್ಲಿ ಕೋವಿಡ್ (Covid-19) ಪ್ರಕರಣಗಳು ಇದ್ದಕ್ಕಿದ್ದಂತೆ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸಿವೆ. ಈ ಹಿನ್ನೆಲೆಯಲ್ಲಿ ತಜ್ಞರು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ. ಕೊರೊನಾ ಹೊಸ ಅಪಾಯಕಾರಿ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕೋವಿಡ್ -19 ರ ಅಪಾಯಕಾರಿ ಡೆಲ್ಟಾಕ್ರಾನ್ (Deltacron) ರೂಪಾಂತರವು ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ-Corona Vaccine For Children: Novovax ಕರೋನಾ ಲಸಿಕೆಗೆ DCGI ಅನುಮೋದನೆ
ಸೋಂಕಿನ ಅಪಾಯ ಇನ್ನೂ ತಪ್ಪಿಲ್ಲ
'ದಿ ಮಿರರ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬಹುತೇಕ ಎಲ್ಲಾ ಸ್ಥಳಗಳಲ್ಲಿ ನಿರ್ಬಂಧಗಳನ್ನು ತೆಗೆದುಹಾಕುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಕೋವಿಡ್‌ನ ಹೊಸ ರೂಪಾಂತರಗಳ ಅಪಾಯ ಮತ್ತು ಅದರ ತ್ವರಿತ ಹರಡುವಿಕೆ ಹೆಚ್ಚಾಗಲು ಪ್ರಾರಂಭಿಸಿದೆ. ನಿಷೇಧವನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ವೈರಸ್‌ನ ಅಪಾಯಕಾರಿ ಹೊಸ ರೂಪ ಹೊರಹೊಮ್ಮುವ ಆತಂಕ ಎದುರಾಗಿದೆ. ಈ ಹಿಂದೆ, ಕೋವಿಡ್ -19 ರ ಓಮಿಕ್ರಾನ್ (Omicron) ರೂಪಾಂತರವು ವಿಶ್ವಾದ್ಯಂತ ಜನರನ್ನು ವೇಗವಾಗಿ ತನ್ನ ತೆಕ್ಕೆಗೆ ಸೆಳೆದಿತ್ತು. ಇದೀಗ ವೈರಸ್‌ನ ಹೊಸ ರೂಪಾಂತರಿ ಕುರಿತು ಅದು ಬಂದ ಹಲವಾರು ದಿನಗಳ ನಂತರ ತಿಳಿಯಲಿದೆ ಎಂದು ಎಚ್ಚರಿಕೆಯಲ್ಲಿ ಹೇಳಲಾಗಿದೆ. ಹೀಗಿರುವಾಗ, ಸೋಂಕಿನ ಬಗ್ಗೆ ಇನ್ನೂ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ. ಕರೋನಾ ವೈರಸ್‌ನ ಹೊಸ ಡೆಲ್ಟಾಕ್ರಾನ್ ರೂಪಾಂತರವು ಇತ್ತೀಚೆಗೆ ಕಾಣಿಸಿಕೊಂಡಿದ್ದು, ಇದು ಡೆಲ್ಟಾ ಮತ್ತು ಓಮಿಕ್ರಾನ್ ನಿಂದ ರೂಪಗೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Coronavirus 4th Wave: ಕೊರೊನಾ ನಾಲ್ಕನೇ ಅಲೆಗೆ ಈ ದೇಶ ತತ್ತರ, ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ
ಫೆಬ್ರುವರಿಯಲ್ಲಿ ಡೆಲ್ಟಾಕ್ರಾನ್ ಪತ್ತೆಯಾಗಿದೆ
'ವೆಲ್ಸ್‌ಆನ್‌ಲೈನ್'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಫೆಬ್ರವರಿ ಮಧ್ಯದಲ್ಲಿ ಡೆಲ್ಟಾಕ್ರಾನ್ ರೂಪಾಂತರ ಪತ್ತೆಯಾಗಿದೆ. ಪ್ಯಾರಿಸ್‌ನ ಪಾಶ್ಚರ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಈ ಕರೋನವೈರಸ್‌ನ ಆನುವಂಶಿಕ ಅನುಕ್ರಮವನ್ನು ಗಮನಿಸಿದ್ದಾರೆ, ಇದು ಇದುವರೆಗಿನ ಎಲ್ಲಾ ರೂಪಾಂತರಗಳಿಗಿಂತ ವಿಭಿನ್ನವಾಗಿದೆ. ಹೊಸ ರೂಪಾಂತರದ ಮಾದರಿಯು ಉತ್ತರ ಫ್ರಾನ್ಸ್‌ನಲ್ಲಿ ವಯಸ್ಸಾದ ವ್ಯಕ್ತಿಯಲ್ಲಿ ಕಂಡುಬಂದಿದೆ ಮತ್ತು ನೋಡಲು ತುಂಬಾ ವಿಚಿತ್ರವಾಗಿದೆ. ಇದರ ಆನುವಂಶಿಕ ಅನುಕ್ರಮವು ಡೆಲ್ಟಾ ರೂಪಾಂತರದಂತೆಯೇ ಇತ್ತು ಮತ್ತು ಡೆಲ್ಟಾ ರೂಪಾಂತರಿ ಕಳೆದ ವರ್ಷ ಭಾರಿ ವಿನಾಶವನ್ನೇ ಸೃಷ್ಟಿಸಿತ್ತು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.