ಜುಲೈ 31 ರವರೆಗೆ ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಲಿದೆ: ಸಿಸೋಡಿಯಾ
DDMA ಸಭೆಯ ಬಳಿಕ ಮಾತನಾಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ಪಸರಿಸುತ್ತಿರುವುದನ್ನು ಗಮನಿಸಿದರೆ, ಜೂನ್ 15ರವರೆಗೆ ದೆಹಲಿಯ ಆಸ್ಪತ್ರೆಗಳಲ್ಲಿ ಸುಮಾರು 15 ಸಾವಿರ ಹಾಸಿಗೆಗಳ ಅವಶ್ಯಕತೆ ಇರಲಿದ್ದು, ಜುಲೈ 31 ರವರೆಗೆ 80 ಸಾವಿರ ಬೆಡ್ ಗಳ ಅವಶ್ಯಕತೆ ಬೀಳಲಿದೆ, ಅಷ್ಟೇ ಅಲ್ಲ ಸೋಂಕು ಪಸರಿಸುತ್ತಿರುವ ಸದ್ಯದ ವೇಗವನ್ನು ಗಮನಿಸಿದರೆ ಜುಲೈವರೆಗೆ ದೆಹಲಿಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿಅಲಿದೆ ಎಂದು ಹೇಳಿದ್ದಾರೆ.
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ನ ಕಮ್ಯೂನಿಟಿ ಸ್ಪ್ರೆಡ್ ಭೀತಿಯ ಹಿನ್ನೆಲೆ ಇಂದು ಉಪರಾಜ್ಯಪಾಲ ಅನೀಲ್ ಬೈಜಲ್ ಅವರ ನೇತೃತ್ವದಲ್ಲಿ DDMA ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಉಪಸ್ಥಿತರಿದ್ದರು . ಒಂದು ವೇಳೆ ದೆಹಲಿಯಲ್ಲಿ ಇದೇ ರೀತಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ಹೊಸರೆ, ಮುಳಿ ಅಂತ್ಯದವರೆಗೆ ದೆಹಲಿಯನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಮನೀಶ್ ಸಿಸೋಡಿಯಾ, "ನಾನು ಸಭೆಯಲ್ಲಿ ದೆಹಲಿಯ ಆಸ್ಪತ್ರೆಗಳನ್ನು ದೇಶದ ಎಲ್ಲ ರೋಗಿಗಳಿಗಾಗಿ ಮುಕ್ತವನ್ನಾಗಿಸಿದ ಕುರಿತು ಪ್ರಶ್ನಿಸಿದೆ. ಆದರೆ ಇದಕ್ಕೆ LG ಸಾಹೇಬರು ಯಾವುದೇ ಉತ್ತರವನ್ನು ನೀಡಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ "ದೆಹಲಿ ಸರ್ಕಾರ ಕೈಗೊಂಡ ನಿರ್ಣಯವನ್ನು ರಾಜ್ಯಪಾಲರು ತಿರುವಿದ ಬಳಿಕ ದೆಹಲಿಯ ಸರ್ಕಾರದ ಮುಂದೆ ದೊಡ್ಡ ಸವಾಲೇ ಎದುರಾಗಿದೆ. ಸದ್ಯ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ಜೂನ್ 30 ರವರೆಗೆ ದೆಹಲಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾಗಲಿದೆ ಹಾಗೂ ಜುಲೈ 30ರವರೆಗೆ ಆಸ್ಪತ್ರೆಗಳಲ್ಲಿ ಸುಮಾರು 80 ಸಾವಿರ ಬೆಡ್ ಗಳ ಅವಶ್ಯಕತೆ ಬೀಳಲಿದೆ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆ 5 ಲಕ್ಷದ ಗಡಿ ದಾಟಲಿದೆ" ಎಂದೂ ಕೂಡ ಸಿಸೋಡಿಯಾ ಹೇಳಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಸರ್ವಪಕ್ಷಗಳ ಸಭೆ ನಡೆಯಲಿದೆ
ವಿಪತ್ತು ನಿರ್ವಹಣಾ ಸಮಿತಿಯ ಸಭೆಯ ಬಳಿಕ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕರೋನಾದ ಪ್ರಸ್ತುತ ಪರಿಸ್ಥಿತಿ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲಾಗುವುದು. ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.