ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೇಶಾದ್ಯಂತ ಲಾಕ್ ಡೌನ್ ಘೋಶಿಸಲಾಗಿದ್ದರೂ ಕೂಡ ಹೊರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ನಡುವೆ ಭಾರತ ಸರ್ಕಾರದ ಒಂದು ಪ್ರಯತ್ನ ದೇಶದ ನಾಗರಿಕರಿಗೆ ತುಸು ನೆಮ್ಮದಿ ನೀಡಲಿದೆ. 


COMMERCIAL BREAK
SCROLL TO CONTINUE READING

ಇದಕ್ಕಾಗಿ ಭಾರತ ಸರ್ಕಾರ ಒಂದು ಆಪ್ ಸಿದ್ಧಪಡಿಸುತ್ತಿದೆ. ಹೌದು, ಕೊರೊನಾ ವೈರಸ್ ನಿಂದ ಪಾರಾಗಲು ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಆಪ್ ವೊಂದನ್ನು ಸಿದ್ಧಪಡಿಸುತ್ತಿದೆ. ಈ ಆಪ್ ಗೆ 'ಕೊರೊನಾ ಕವಚ್' ಆಪ್ ಎಂದು ಹೆಸರಿಸಲಾಗಿದೆ. ಸದ್ಯ ಈ ಆಪ್ ನ ಟೆಸ್ಟಿಂಗ್ ಜಾರಿಯಲ್ಲಿದೆ. ಆದರೆ, ಈ ಆಪ್ ನಮ್ಮ-ನಿಮ್ಮೆಲ್ಲರಿಗೆ ಎಷ್ಟೊಂದು ಲಾಭಕಾರಿಯಾಗಲಿದೆ ಎಂಬುದನ್ನು ತಿಳಿದರೆ, ನೀವು ಇದರ ಬಿಡುಗಡೆಗೆ ನಿಶ್ಚಿತವಾಗಿ ತುದಿಗಾಲಲ್ಲಿ ನಿಂದು ಕಾಯುವಿರಿ.


ಈ ಆಪ್ ನಿಂದ ಏನಾಗಲಿದೆ?
ವರದಿಗಳ ಪ್ರಕಾರ, ಕೊರೊನಾ ಕವಚ್ ಆಪ್ ತನ್ನ ಬಳಕೆದಾರರು ಇರುವ ಲೋಕೇಶನ್ ನ ಹತ್ತಿರದಲ್ಲಿ ಇರುವ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಒದಗಿಸಲಿದೆ. ಇದಕ್ಕಾಗಿ ಇದು ನಿಮ್ಮ ಲೋಕೇಶನ್ ಅನ್ನು ಬಳಕೆ ಮಾಡಲಿದೆ. ಲೋಕೇಶನ್ ದತ್ತಾಂಶದ ಆಧಾರದ ಮೇಲೆ ಈ ಆಪ್ ನಿಮ್ಮ ಹತ್ತಿರದಲ್ಲ್ಲಿ ಇರುವ ಕೊರೊನಾ ರೋಗಿಗಳ ಕುರಿತು ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ ಸರ್ಕಾರ ಯಾವ ನಾಗರಿಕರಿಗೆ  ಸೆಲ್ಫ್ ಕ್ವಾರಂಟೀನ್ ಆಗಲು ಸೂಚಿಸಿದೆ ಎಂಬುದರ  ಮಾಹಿತಿಯನ್ನೂ ಸಹ ಈ ಆಪ್ ನಿಮಗೆ ನೀಡಲಿದೆ. ಈ ಆಪ್ ನಿಮ್ಮಿಂದ ಕೊರೊನಾ ಸೋಂಕಿತ ರೋಗಿ ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ನಿಮಗೆ ತಿಳಿಸಲಿದೆ. ಆದರೆ, ಆ ರೋಗಿಯ ಗುರುತು ಮಾತ್ರ ಗೌಪ್ಯವಾಗಿ ಇಡಲಿದೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪ್ ಸಿದ್ಧಪಡಿಸಲಾಗುತ್ತಿದೆ. ಈ ಆಪ್ ಭಾರತ ಸರ್ಕಾರಕ್ಕೂ ಸಹ ಲಾಭಕಾರಿಯಾಗಲಿದೆ. ಈ ಆಪ್ ನ ಸಹಾಯದಿಂದ ಸರ್ಕಾರ ರೋಗಿಗಳ ದಾಖಲೆಗಳನ್ನು ಸಂಗ್ರಹಿಸಲಿದೆ. ಒಂದು ವೇಳೆ ನಿಮ್ಮ ಅಕ್ಕಪಕ್ಕಕ್ಕೆ ಯಾವುದೇ ಕೊರೊನಾ ವೈರಸ್ ರೋಗಿ ಇದ್ದರೆ ಅಥವಾ ನಿಮ್ಮ ಹತ್ತಿರದಿಂದ ಹಾದುಹೋದರೆ ತಕ್ಷಣ ಈ ಆಪ್ ನಿಮಗೆ ಅಲರ್ಟ್ ಕೂಡ ನೀಡಲಿದೆ. ಇದಕ್ಕಾಗಿ ರೆಡ್ ಕಲರ್ ಅಲರ್ಟ್ ಅನ್ನು ಈ ಆಪ್ ನಲ್ಲಿ ಜಾರಿಗೊಳಿಸಲಾಗುವುದು.


ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಈ ಆಪ್ ಅನ್ನು ಅಭಿವೃದ್ಧಿಗೊಲಿಸುತ್ತಿದೆ. ಈ ಆಪ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ಇತರೆ ಆಪ್ ಗಳಂತೆ ಮಾಹಿತಿಗಳನ್ನು ಒದಗಿಸಬೇಕಾಗಲಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿದೆ. OTP ವೆರಿಫಿಕೆಶನ್ ಬಳಿಕ ನೀವು ಈ ಆಪ್ ಅನ್ನು ಬಳಸಬಹುದಾಗಿದೆ.