ತಿರುವನಂತಪುರಂ: Corona Third Wave - ಕೊರೊನಾದ ಮೂರನೇ ಅಲೆಯ ಆತಂಕದ ನಡುವೆ, ಕೇರಳ ಸರ್ಕಾರ (Kerala Government) ಇಡೀ ರಾಜ್ಯದಲ್ಲಿ ನೈಫ್ ಕರ್ಫ್ಯೂ (Night Curfew) ಜಾರಿಗೊಳಿಸಿದೆ. ಸಿಎಂ ಪಿಣರಾಯಿ ವಿಜಯನ್ (CM Pinarayi Vijayan) ಶನಿವಾರ ಹೊಸ ಆದೇಶವನ್ನು ಹೊರಡಿಸಿದ್ದಾರೆ ಮತ್ತು 'ಯಾವುದೇ ಕಾರಣವಿಲ್ಲದೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮನೆಯಿಂದ ಹೊರಬರುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದಿದ್ದಾರೆ. ಈ ಆದೇಶವು ಸೋಮವಾರದಿಂದ ಜಾರಿಗೆ ಬರಲಿದೆ.


ಬಿಜೆಪಿಯ ಆದಾಯದಲ್ಲಿ ಭಾರೀ ಏರಿಕೆ: ರಾಹುಲ್ ಗಾಂಧಿ ಆಕ್ರೋಶ


COMMERCIAL BREAK
SCROLL TO CONTINUE READING

ಕಳೆದ 24 ಗಂಟೆಗಳಲ್ಲಿ 31265 ಹೊಸ ಪ್ರಕರಣಗಳು
ರಾಜ್ಯದ ಮುಖ್ಯಮಂತ್ರಿ ಸಿಎಂ ಪಿಣರಾಯಿ ವಿಜಯನ್ ಅವರು, 'ಕರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು, ಇಡೀ ರಾಜ್ಯದಲ್ಲಿ ಪರೀಕ್ಷೆಯನ್ನು ತೀವ್ರಗೊಳಿಸಲು ಆದೇಶ ನೀಡಿದ್ದಾರೆ. ಶನಿವಾರ ಕೂಡ, 1,67,497 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದೆ, ಅದರಲ್ಲಿ 31,265 ಜನರ ಮಾದರಿಗಳು ಪಾಸಿಟಿವ್ ಕಂಡುಬಂದಿವೆ. ಹಾಗೆಯೇ 153 ಕೊರೊನಾ ರೋಗಿಗಳು ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.


ಇದನ್ನೂ ಓದಿ-Money Laundering Case: ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಅವರ ಪತ್ನಿಗೆ ಸಮನ್ಸ್ ಜಾರಿ


ಕೇಂದ್ರ ಸರ್ಕಾರ ಈ ಮೊದಲೇ ಈ ಕುರಿತು ಸಂಕೇತ ನೀಡಿತ್ತು
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ 40 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಿಂದ ವರದಿಯಾಗಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು (Central Government) ಈ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು ಮತ್ತು ಯಾವುದೇ ರೀತಿಯಲ್ಲಿ ಅದನ್ನು ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಅದಕ್ಕಾಗಿಯೇ ಕೇಂದ್ರವು ಎರಡೂ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದು ರಾತ್ರಿ ಕರ್ಫ್ಯೂ ವಿಧಿಸಲು ಪರಿಗಣಿಸುವಂತೆ ಕೋರಿತ್ತು. ತಜ್ಞರ ಪ್ರಕಾರ, ಕೇರಳದಲ್ಲಿ ಹಠಾತ್ ಕರೋನಾ ಪ್ರಕರಣಗಳು ಹೆಚ್ಚಾಗಲು ಕಾರಣ ಓಣಂ ಹಬ್ಬವಾಗಿದ್ದು, ಇದನ್ನು ರಾಜ್ಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ.


ಇದನ್ನೂ ಓದಿ - 7th Pay Commission: ಈ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಮತ್ತು ಡಿಎ ಸಿಗುತ್ತದೆಯೇ? ಇಲ್ಲಿದೆ ಮಹತ್ವದ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.