ನವದೆಹಲಿ: Begger Vaccination - ಫುಟ್ ಪಾಥ್ ನಲ್ಲಿ ವಾಸಿಸುವ ಸೂರಿಲ್ಲದ ಜನರಿಗೆ ಹಾಗೂ ಭಿಕ್ಷುಕರಿಗೆ ಲಸಿಕೆ ಹಾಕಲು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಮನ್ವಯದಿಂದ ವಿಶೇಷ ಅಭಿಯಾನ ನಡೆಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಪತ್ರ ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!


ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು SC
ಪಾದಚಾರಿ ಮಾರ್ಗದಲ್ಲಿ ವಾಸಿಸುವ ಜನರು ಮತ್ತು ಭಿಕ್ಷುಕರಿಗೆ ಕೊರೊನಾ (Coronavirus)ಲಸಿಕೆ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ  ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ (Central Government)ನೋಟಿಸ್ ನೀಡಿ ಅದಕ್ಕೆ ಉತ್ತರ ನೀಡಲು ಸೂಚಿಸಿತ್ತು. ಈ ಕುರಿತು ಸ್ಪಷ್ಟವಾಗಿ ಹೇಳಿಕೆ ನೀಡಿದ್ದ ನ್ಯಾಯಾಲಯ ರಸ್ತೆಗಳು ಹಾಗೂ ಸಿಗ್ನಲ್ ಗಳಿಂದ ಭಿಕ್ಷುಕರನ್ನು ತೆಗೆದು ಹಾಕುವ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಕುರಿತು ಹೇಳಿಕೆ ನೀಡಿದ್ದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್ ಷಾ ನೇತೃತ್ವದ ಪೀಠ. ಬಡತನ ಇಲ್ಲದಿದ್ದರೆ ಯಾರೂ ಭಿಕ್ಷೆ ಬೇಡಲು ಬಯಸುವುದಿಲ್ಲ ಎಂದು ಹೇಳಿತ್ತು.


ಇದನ್ನೂ ಓದಿ-WHO ಎಚ್ಚರಿಕೆ: ಕೋವಿಡ್ -19 ರ ಹೊಸ ರೂಪ 'ಡೆಲ್ಟಾ' ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ


'ಬಡತನ ಭಿಕ್ಷೆ ಬೇಡಲು ಒಂದು ಪ್ರಮುಖ ಕಾರಣವಾಗಿದೆ'
ಭಿಕ್ಷಾಟನೆಗೆ ಬಡತನವೇ ಕಾರಣ. ಈ ಕುರಿತು ನಾವು ಮಾನವೀಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಭಿಕ್ಷುಕರು ಸಾರ್ವಜನಿಕ ಸ್ಥಳಗಳು ಮತ್ತು ಟ್ರಾಫಿಕ್ ಪೋಸ್ಟ್‌ಗಳಿಂದ ದೂರ ಹೋಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಡತನವು ಭಿಕ್ಷೆ ಬೇಡುವಂತೆ ಒತ್ತಾಯಿಸಿದಾಗ, ನ್ಯಾಯಾಲಯವು ಅಂತಹ ಕಠಿಣ ಮನೋಭಾವವನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಿವಾಸಿಗಳು ಮತ್ತು ಭಿಕ್ಷುಕರಿಗೆ ಲಸಿಕೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವು ಕೂಡಲೇ ಗಮನ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇದನ್ನೂ ಓದಿ-Mixing Covid-19 Vaccines: ವ್ಯಾಕ್ಸಿನ್ ಮಿಕ್ಸಿಂಗ್ ಅಪಾಯಕಾರಿಯೇ? WHO ಪ್ರಮುಖ ವೈಜ್ಞಾನಿಕ ಈ ಕುರಿತು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ