ನವದೆಹಲಿ: ಕೊರೊನಾ ವೈರಸ್ ಪ್ರಕೋಪ ಮುಂದುವರೆದಿದೆ. ಇನ್ನೊಂದೆಡೆ ಬೊಕ್ಕ ತಲೆಯ ಕಾರಣ ಕೊರೊನಾ ಸೋಂಕು ವೇಗವಾಗಿ ಪಸರಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಹೌದು, ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.


COMMERCIAL BREAK
SCROLL TO CONTINUE READING

ವುಹಾನ್ ನಿಂದ ಕೊರೊನಾ ವೈರಸ್ ಹರಡಿದ ಬಳಿಕ ಪುರುಷರಲ್ಲಿ ಈ ವೈರಸ್ ನಿಂದ ಸಾವು ಸಂಭವಿಸುವ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗಿತ್ತು.  ಇದರಲ್ಲಿ ಸುಮಾರು 122 ಕೊರೊನಾ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಹಾಗೂ ಅವರಲ್ಲಿ ಶೇ.79ರಷ್ಟು ಜನರು ಬೊಕ್ಕ ತಲೆಯವರಾಗಿದ್ದರು. ಅಧ್ಯಯನದ ಪ್ರಕಾರ ಬೋಳುತಲೆ ಹಾಗೂ ಕೊರೊನಾ ಹರಡುವಿಕೆ ಪರಸ್ಪರ ಸಂಬಂಧಹೊಂದಿವೆ ಎಂದು ಹೇಳಲಾಗಿತ್ತು. 


ಅಷ್ಟೇ ಅಲ್ಲ ಪುರುಷರಲ್ಲಿರುವ ANDROGEN ಹಾರ್ಮೋನ್, ಕೊರೊನಾ ಸೋಂಕಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದೂ ಕೂಡ ಹೇಳಲಾಗಿತ್ತು. ಈ ಹಾರ್ಮೋನ್ ನಿಂದ ಪುರುಷರಲ್ಲಿ ವೈರಸ್ ವಿರುದ್ಧ ಹೋರಾಡುವ ಔಷಧಿ ಕೆಲಸ ಮಾಡುವುದಿಲ್ಲ ಮತ್ತು ರೋಗಿ ಗಂಭೀರವಾಗಿ ಕಾಯಿಲೆಗೆ ಒಳಗಾಗಿ, ಚೇತರಿಸಿಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳಬಹುದು. 


ಇದಕ್ಕೂ ಮೊದಲು ನಡೆಸಲಾದ ಒಂದು ಅಧ್ಯಯನ ಪುರುಷರ ರಕ್ತದಲ್ಲಿ MOLECULES ಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಅವರು ಸುಲಭವಾಗಿ ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.