ನವದೆಹಲಿ: ಕರೋನಾವೈರಸ್‌ನ ಮೂರನೇ ತರಂಗವು (Corona Third Wave) ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಸೆಪ್ಟೆಂಬರ್‌ನಿಂದ ಅಕ್ಟೋಬರ್ ವರೆಗೆ  ದೇಶದಲ್ಲಿ ಮತ್ತೆ ಕರೋನಾ ಪ್ರಕರಣಗಳು ಉಲ್ಬಣಗೊಳ್ಳಲಿದೆ. ಈ ಸಮಯದಲ್ಲಿ ಪ್ರತಿದಿನ ಐದು ಲಕ್ಷ ಕರೋನಾ ಪ್ರಕರಣಗಳು ವರದಿಯಾಗಬಹುದು ಎಂದು ಐಐಟಿ ಕಾನ್ಪುರ (IIT Kanpur) ಡೇಟಾವನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ವರದಿಯಲ್ಲಿ ಮೂರು ಪ್ರಮುಖ ವಿಷಯಗಳು ಹೊರಬಂದವು:
ಈ ವರದಿಯಲ್ಲಿ ಮೂರು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಜುಲೈ 15 ರ ವೇಳೆಗೆ ಇಡೀ ದೇಶವನ್ನು ಅನ್ಲಾಕ್ (Unlock) ಮಾಡಲಾಗುತ್ತದೆ ಎಂದು ನಂಬಲಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯು ಜನವರಿಯಲ್ಲಿ ಇದ್ದ ಹಾಗೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಜನವರಿಯಲ್ಲಿ ಎಲ್ಲವನ್ನೂ ಅನ್ಲಾಕ್ ಮಾಡಲಾಯಿತು. ಆದರೆ ನಾವು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಸಾಮಾಜಿಕ ಅಂತರ ನಿಯಮಗಳನ್ನು ಅನುಸರಿಸದೇ, ಮಾಸ್ಕ್ ಧರಿಸುವಲ್ಲಿ ನಿರ್ಲಕ್ಷ ವಹಿಸಿದರೆ ಕರೋನಾ ಮೂರನೇ ತರಂಗವು (Corona Third Wave) ನಾವು ಊಹಿಸಿರುವುದಕ್ಕಿಂತ ಭಯಂಕರವಾಗಿರಲಿದೆ. ದೇಶದಲ್ಲಿ ಕರೋನದ ಮೂರನೇ ತರಂಗವು ಅಕ್ಟೋಬರ್ ವೇಳೆಗೆ  ಉತ್ತುಂಗಕ್ಕೆ ಏರಬಹುದು ತಜ್ಞರು ಸಹ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- Delta Plus Variant: ದೇಶದ 3 ರಾಜ್ಯಗಳಲ್ಲಿ ಕರೋನಾ ಡೆಲ್ಟಾ ಪ್ಲಸ್ ರೂಪಾಂತರದ ಎಂಟ್ರಿ, ಈ ರಾಜ್ಯದಲ್ಲಿ ಹೆಚ್ಚಿನ ಪ್ರಕರಣ ದಾಖಲು


ವೈರಸ್‌ನ ಪ್ರತೀಕಾರದ ರೂಪವು ಹೆಚ್ಚು ಮಾರಕವಾಗಿರುತ್ತದೆ:
>> ವರದಿಯ ಪ್ರಕಾರ, ಸೆಪ್ಟೆಂಬರ್‌ನಿಂದ ಪರಿಸ್ಥಿತಿ ಮತ್ತೊಮ್ಮೆ ಹದಗೆಡಲು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ ವೇಳೆಗೆ ಅದರ ಪ್ರಮಾಣವು ಸಾಕಷ್ಟು ಹೆಚ್ಚಾಗುತ್ತದೆ. 
>> ಎರಡನೆಯ ವಿಷಯವೆಂದರೆ, ಬದಲಾದ ರೂಪಾಂತರಿತ ರೂಪಗಳೊಂದಿಗೆ ಕರೋನಾ ಮೂರನೇ ತರಂಗದಲ್ಲಿ  (Corona Third Wave)  ಬಂದರೆ ಮತ್ತು ಜನರು ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳದಿದ್ದರೆ, ಸೆಪ್ಟೆಂಬರ್ ವೇಳೆಗೆ ಅದು ತಾರಕಕ್ಕೇರಲಿದೆ. ಅಂದರೆ, ಆಗಸ್ಟ್‌ನಿಂದ ಪರಿಸ್ಥಿತಿಗಳು ಹದಗೆಡಲು ಪ್ರಾರಂಭವಾಗುತ್ತದೆ. 
>> ಮೂರನೆಯ ಹಂತವೆಂದರೆ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರ ಜೊತೆಗೆ ಲಸಿಕೆಯನ್ನು ಪಡೆದರೆ ಅಂತಹ ಪರಿಸ್ಥಿತಿಯಲ್ಲಿ ನವೆಂಬರ್ ವೇಳೆಗೆ ಮೂರನೇ ತರಂಗದ ಉತ್ತುಂಗಕ್ಕೇರಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Corona 3rd Wave : ಕೊರೋನಾ 3ನೇ ಅಲೆಯಲ್ಲಿ ಮಕ್ಕಳು ಸೇಫ್..!​? 


ಈ ಅಂದಾಜು ವ್ಯಾಕ್ಸಿನೇಷನ್ ಅನ್ನು ಒಳಗೊಂಡಿಲ್ಲ:
ಈ ಅಂದಾಜಿನಲ್ಲಿ ವ್ಯಾಕ್ಸಿನೇಷನ್ ಸೇರಿಸಲಾಗಿಲ್ಲ ಎಂದು ಐಐಟಿ ಕಾನ್ಪುರ್ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಲಸಿಕೆ ಪ್ರಸರಣ ಸರಪಳಿಯನ್ನು ಮುರಿದು ಗರಿಷ್ಠ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂಶೋಧಕರು ವ್ಯಾಕ್ಸಿನೇಷನ್‌ನೊಂದಿಗೆ ಮೂರನೇ ತರಂಗದ ಮಾರ್ಪಡಿಸಿದ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.