ನವದೆಹಲಿ: ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಒಂದು ವೇಳೆ ಸರ್ಕಾರ ಭಾರತೀಯ ಚಿಲ್ಲರೆ ವ್ಯಾಪಾರಿಗಳಿಗೆ
ಸಹಾಯಹಸ್ತ ಚಾಚದೆ ಹೋದಲ್ಲಿ ದೇಶಾದ್ಯಂತ ಶೇ. 30 ರಷ್ಟು ಚಿಲ್ಲರೆ ವ್ಯಾಪಾರಗಳು ಬಂದ್ ಆಗಲಿವೆ. ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಭಾರತೀಯ ಚಿಲ್ಲರೆ ವ್ಯಾಪಾರ ಅಸೋಸಿಯೇಷನ್ ಸಿಇಓ ರಾಜಗೋಪಾಲನ್, ದೇಶಾದ್ಯಂತ ಚಿಲ್ಲರೆ ವ್ಯಾಪಾರ ಫೆಬ್ರುವರಿ ತಿಂಗಳಿನಿಂದಲೇ ಪ್ರಭಾವಿತಕ್ಕೆ ಒಳಗಾಗಿದ್ದು, ಕಳೆದ ತಿಂಗಳು ಸಾಮಾನ್ಯ ವ್ಯವಹಾರ ಶೇ. 50-60ರಷ್ಟಿತ್ತು. ಮಾರ್ಚ್ ತಿಂಗಳಿನಲ್ಲಿ ಇದು ಬಹುತೇಕ ಶೇ.೦ಕ್ಕೆ ಬಂದು ತಲುಪಿದೆ. ಈ ಕುರಿತು ಮಾತನಾಡಿರುವ ಅವರು," ಈ ಪರಿದೃಶ್ಯ ಭಾರಿ ಗಂಭೀರವಾಗಿದ್ದು, ಒಂದು ವೇಳೆ ಇದೆ ರೀತಿ ಮುಂದುವರೆದರೆ ಬಹುತೇಕ ಚಿಲ್ಲರೆ ವ್ಯಾಪಾರಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ" ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಚಿಲ್ಲರೆ ವ್ಯಾಪಾರಿಗಳಿಗೆ ದಿನನಿತ್ಯ ಹಣ ಪಾವತಿಸಬೇಕು. ಹೀಗಿರುವಾಗ ಅವರು ದಿನನಿತ್ಯದ ಖರ್ಚು ಹೇಗೆ ನಿಭಾಯಿಸಬೇಕು. ಅವರ ಆದಾಯದ ಶೇ.8 ರಷ್ಟು ಹಣ ಅವರು ಬಾಡಿಗೆಯಾಗಿ ಪಾವತಿಸಬೇಕು. ಆದಾಯದ ಶೇ.7-8 ರಷ್ಟು ಅವರು ವೇತನ ಪಾವತಿಸಬೇಕು. ಸಾಮಗ್ರಿಗಳ ಪೂರೈಕೆದಾರರಿಗೂ ಸಹ ಅವರು ಹಣ ಪಾವತಿಸಬೇಕು. ಹಲವು ದಿನಗಳಿಂದ ಅವರು ಪೂರೈಕೆದಾರರಿಗೆ ಹಣ ಕಟ್ಟಿಲ್ಲ ಏಕೆಂದರೆ ಅವರ ಬಳಿ ಇದಕ್ಕಾಗಿ ಯಾವುದೇ ಆದಾಯ ಇಲ್ಲ. 


"ಚಿಲ್ಲರೆ ವ್ಯಾಪಾರಿಗಳ ಶೇ.85ರಷ್ಟು ಖರ್ಚು ನಿಸ್ಚಿತವಾಗಿರುತ್ತದೆ ಇನ್ನು RAI ಸಿಇಓ, ಒಂದು ವೇಳೆ ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ ಹೋದಲ್ಲಿ ಮುಂದಿನ ಆರು ತಿಂಗಳಲ್ಲಿ ಶೇ.30ರಷ್ಟು ಚಿಲ್ಲರೆ ವ್ಯಾಪಾರಿಗಳು ಮಾರುಕಟ್ಟೆಯಿಂದ ಹೊರಹೊಗಲಿದ್ದಾರೆ ಎಂದು ಅವರು ಹೇಳಿದ್ದಾರೆ.


ಈ ಕುರಿತು ಪ್ರೋತ್ಸಾಹನ ಪ್ಯಾಕೇಜ್ ಬಿಡುಗಡೆ ಮಾಡಲು ತಾವು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳಿರುವ ರಾಜಗೋಪಾಲನ್, ಚಿಲ್ಲರೆ ವ್ಯಾಪಾರಿಗಳ ಹಿತರಕ್ಷಣೆಗೆ ಸರ್ಕಾರ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಅದರಲ್ಲೂ ವಿಶೇಷವಾಗಿ ಬಾಡಿಗೆಯಲ್ಲಿ ಸಬ್ಸಿಡಿ ಹಾಗೂ  ಕಾರ್ಮಿಕರ ವೇತನ ಪಾವತಿ ಪ್ರಮುಖವಾಗಿವೆ ಎಂದು ರಾಜಗೋಪಾಲನ್ ಹೇಳಿದ್ದಾರೆ.


ದೇಶಾದ್ಯಂತ ಸುಮಾರು 60 ಲಕ್ಷ ಜನರು ಚಿಲ್ಲರೆ ವ್ಯಾಪಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ರಾಜಗೋಪಾಲನ್ ಅವರ ಪ್ರಕಾರ ಇವರಲ್ಲಿ ಬಹುತೇಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.


ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಜಗೋಪಾಲನ್, "ಇವರಲ್ಲಿ ಹಲವು ಕಾರ್ಮಿಕರಿಗೆ ಈ ತಿಂಗಳು ಹಾಗೂ ಸಾಧ್ಯವಾದರೆ ಮುಂದಿನ ತಿಂಗಳ ವೇತನ ಸಿಗಲಿದೆ, ಆದರೆ, ಚಿಲ್ಲರೆ ವ್ಯಾಪಾರಿಗಳು ಇದಕ್ಕೆ ಬೆಲೆ ತೆರಲಿದ್ದಾರೆ. ಅವರ ಬಳಿ ಎರಡು ಅಥವಾ ಮೂರು ತಿಂಗಳ ವೇತನ ಭಾರ ಹೊರುವ ಕ್ಷಮತೆ ಅವರ ಬಳಿ ಇಲ್ಲ" ಎಂದು ಹೇಳಿದ್ದಾರೆ.


"ನಾವು ಈಗಾಗಲೇ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದು,  ವೇತನ ಪಾವತಿಗಾಗಿ ಯಾವುದೇ ರೀತಿಯ ಸಬ್ಸಿಡಿ ನೀಡುವಂತೆ ಹಾಗೂ ಸಾಲ ಮರುಪಾವತಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿರುವುದಾಗಿ" ಗೋಪಾಲನ್ ಹೇಳಿದ್ದಾರೆ.